ಕಾವ್ಯ ಸಂಗಾತಿ
ಲಲಿತಾ ಪ್ರಭು ಅಂಗಡಿ
ಹೆಣ್ಣು ಹುಣ್ಣಲ್ಲ
ಹೆಣ್ಣಿಗೂ ಹುಣ್ಣಿಗೂ ಹೋಲಿಕೆಬೇಡ
ಮಣ್ಣು ಹೊನ್ನಿನೊಳಗೂ ಕೂಡಿಸಬೇಡ
ಹೆಣ್ಣು ಹೆಣ್ಣಂತೆ ಜೀವ ನೋಡಾ
ಅವಳಿಗ್ಯಾಕೆ ಲೇಪನದ ಶಿಕ್ಷೆ
ಇಬ್ಬರಿಗೂ ಇರಲಿ ಸಮತೆಯ ರಕ್ಷೆ
ಆವಳಿಗೂ ನಿನ್ನಂತೆ ಬದುಕುವ ಹಕ್ಕುಂಟು
ಬೆರೆತು ಬಾಳಿದರೆ ಸಾರ್ಥಕವುಂಟು
ಆಯುಧ ಕೊಟ್ಟು ಅಸ್ತ್ರಕೊಟ್ಟು ರೂಪಿಸಬೇಡ
ರಂಬೆ ಊರ್ವಶಿಯಂತೆ ಚಿತ್ರಿಸಬೇಡ
ಕೈ ಗೊಂಬೆಯಂತೆ ಆಡಿಸಬೇಡ
ನರ್ತನ ಮಾಡಿಸಿ ಮೋಜು ನೋಡಬೇಡ
ಚಿತ್ರಹಿಂಸೆ ಕೊಟ್ಟು ದಹಿಸಬೇಡ
ಅಂಗಚೇಷ್ಟೆಗಾಗಿ ಕಾಡಬೇಡ
ಅವಳಂತಾರಳಕೆ ಇಳಿದು ಒಮ್ಮೆನೋಡಾ
ಜೀವ ಭಾವಕೆ ಬೆರೆತು ನೋಡಾ
ಹೆಣ್ಣೆಂದರೆ ಹುಣ್ಣೆಂದು ಕಿವುಚಬೇಡ
ನಿನ್ನಂತೆ ಅವಳೂ ಸಮಾನ ನೋಡ
ನಡುವೆ ಸುಳಿವ ಹೆಣ್ಣು ಅಲ್ಲ ಗಂಡುಇಲ್ಲ
ಒಬ್ಬರೊಬ್ಬರ ಅರಿತು ನೋಡಾ.
ಲಲಿತಾ ಪ್ರಭು ಅಂಗಡಿ