ಡಾ. ನಾಗರತ್ನ ಅಶೋಕ ಭಾವಿಕಟ್ಟಿ-ಹಂಬಲ

ತಂಗಾಳಿಯು ಆಲಾಪಿಸುತಿದೆ
ಪಿಸು ಮಾತನು ಕೇಳಲು
ಅಲೆಗಳು ಅಬ್ಬರಿಸುತಿವೆ
ನೀ ಬರುವದ ನೋಡಲು

ಬರಬಿಸಿಲಲು ತಂಪೆರಗುತಿದೆ
ನಿನ ಸನಿಹಕ್ಕೆ ಸಾಗಲು
ಅಂಧತೆಯಲು ಬೆಳಕಾಗುತಿದೆ
ನಿನ ದೃಷ್ಟಿಗೆ ಸಿಗಲು

ಮೊಗವೇಕೋ ಮುಗಳ್ನಗುತಿದೆ
ಕುಡಿ ನೋಟವ ಕಾಣಲು
ಆಗಸದಲಿ ನಕ್ಷತ್ರವು
ನೀ ಬರದಿರೆ ಬಯಲು

ಎದೆತಾಳವೆ ತಪ್ಪುತಿದೆ
ನಿನ ಹೆಜ್ಜೆಯ ಗದ್ದಲು
ಎನ್ನೊಡಲಲಿ ಹರಿಯುತಿದೆ
ನಿನ ಹರುಷದಾ ಹೊನಲು

ಪ್ರತಿಕ್ಷಣದಲು ಹಂಬಲಿಸುತಿದೆ
ನಿನ ಬೆವರಿನ ಘಮಲು
ನಿನ್ನರಿಕೆಯು ತಿಳಿಯುತಿದೆ
ನೀ ಕನಸಲಿ ಬರಲು


5 thoughts on “ಡಾ. ನಾಗರತ್ನ ಅಶೋಕ ಭಾವಿಕಟ್ಟಿ-ಹಂಬಲ

Leave a Reply

Back To Top