ಭಾರ್ಗವಿ.ಎಸ್.ನಾಯ್ಕ ಕವಿತೆ-ಚಂದಿರ ಮತ್ತು ಮಲ್ಲಿಗೆಯ ಒಲವು…‌‌

ಹಗಲು ಸೊರಗಿ ಇರುಳು ಅರಳಿ
ರಸ್ತೆ ಬದಿಯ ದೀಪವೆಲ್ಲಾ
ಮಂಕಾಗಿ ಮಿಂಚುತಲಿದ್ದವು
ಯಾವುದೊ ಮೂಲೆಯಲ್ಲಿ
ಮಲ್ಲಿಗೆಯ ಮನವು ಮರುಗುತಲಿತ್ತು

ಚಂದಿರನೊಬ್ಬ ಬಂದಿಹನಲ್ಲಿ
ಬಾನ ವಲ್ಲಿಯ ಮೇಲೆ…
ಹಾಲ್ಬೆಳಕನುಂಡಿತು ಹೊಳೆಯ ದಂಡೆ
ಅಲ್ಲೇ ಮಿಂಚುವ ಮಿಂಚುಳಗಳ ನಾ ಕಂಡೆ
ಮಾತಿಗಿಳಿಯಿತು ಮಲ್ಲಿಗೆ ಬಾನಿನೊಂದಿಗೆ ಬಂದಿಯಾದ ಚಂದಿರನೊಂದಿಗೆ

“ಒಲ್ಲದ ಮನಸ್ಸಲ್ಲಿ ಒರೆಮುಖವ
ಮಾಡಿದರು ನನ್ನ ಗಲ್ಲವ ತಿರುಗಿಸಿ
ಪ್ರೀತಿಯ ನಗೆ ಬೀರುವವರಿಲ್ಲ ಇಲ್ಲಿ
ನೀನಿರುವೆ ಅಲ್ಲಿ ಬಾನ ಬಂಧನದಲ್ಲಿ
ನಾನಿರುವೆ ಇಲ್ಲಿ ಬಳ್ಳಿಯ ಬಂಧನದಲ್ಲಿ”

ಒಲವೊಂದು ಬೆಸೆದು ಸೇತುವೆಯೊಂದು
ಹೊಸದಿದೆ ಬಾನು ಬಳ್ಳಿಯ ನಡುವೆ
ಬೆಳಕ ಚೆಲ್ಲುವನಲ್ಲಿ ಚಂದಿರ ಇಳೆಯ
ಹಂದರಕ್ಕೆ ಮಲ್ಲಿಗೆ ಮೊಗ ನೋಡಲು
ಪರಿಮಳವ ಸೂಸುವುದಿಲ್ಲಿ ಮಲ್ಲಿಗೆ
ತಂಗಾಳಿಯೊಂದು ತಲುಪಿಸಲಿ
ಚಂದಿರನಲ್ಲಿಗೆ ಎಂದು.‌‌…..!!

ಅನುರಾಗದ ಅಲೆಗಳ
ತಡೆಯುವವರು ಇಲ್ಲ ಇಲ್ಲಿ ….!!


4 thoughts on “ಭಾರ್ಗವಿ.ಎಸ್.ನಾಯ್ಕ ಕವಿತೆ-ಚಂದಿರ ಮತ್ತು ಮಲ್ಲಿಗೆಯ ಒಲವು…‌‌

Leave a Reply

Back To Top