ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬೇಸರವೇತಕೆ ನೀರೆ
ನೇಸರನಿಳೆಗಿಳಿದಿರಲು
ಆಸರೆಯಾದವನಿನ್ನು
ಬರಲಿಲ್ಲವೆಂದೂ…

ಸಹನಾ ಮೂರ್ತಿ ನೀನು
ಗಹನವಾಗಿ ಚಿಂತಿಸದಿರು
ಬಹಳ ದೂರದಲ್ಲಿಲ್ಲನವ
ಹತ್ತಿರದಲ್ಲೇ ಇರುವನಲ್ಲಾ…..

ಅವನಿಲ್ಲದ ತಾಣದಲಿ
ಅವನಿಗಾಗಿ ಕಾಯುತಲಿ
ಸಮಯವದು ಸರಿಯುತಿಲ್ಲ
ಅವನೆಡೆಗಿಹುದು ಗಮನವೆಲ್ಲಾ…..

ಎಲ್ಲಿ ಹೋದನೆನ್ನ ಮಾರ
ಗಲ್ಲ ಚಿವುಟಿದ ಚಿತ್ತಚೋರ
ಮೆಲ್ಲ ಬಂದು ನಿಲ್ಲು ಬಾರ
ನಲ್ಲ ನಿನ್ನಯ ಪ್ರೀತಿ ಅಪಾರ

ನಿನ್ನ ಬರುವಿಕೆಯ ಹಾದಿ
ಎನ್ನ ಮನದೊಳು ತವಕದಿ
ಬಿನ್ನಹ ಗೈದಿಹೆ ಮಹಾದೇವನ
ಸನಿಹಕೆ ಕರೆತರಲು ಚೆಲುವನ


About The Author

1 thought on “ನಳಿನಾ_ದ್ವಾರಕನಾಥ್ ಅವರ ಕವಿತೆ-ಬೇಸರ”

Leave a Reply

You cannot copy content of this page

Scroll to Top