ಕಾವ್ಯ ಸಂಗಾತಿ
ಮನ್ಸೂರ್ ಮುಲ್ಕಿ
ಮಣ್ಣು
ತೆಂಗಿನ ಗರಿಗಳು ಬಾನನೇ ನೋಡುತ
ಮೆಲ್ಲನೆ ಭೂಮಿಗೆ ಬಾಗುವುದು
ಮನುಷ್ಯನ ಆಯುಷ್ಯ ಖುಷಿಯನ್ನೇ ಕೊಟ್ಟರು
ಒಂದು ದಿನ ಮಣ್ಣಲ್ಲಿ ಕರಗುವುದು
ಒಳಿತು ಮಾಡುವ ಮನಸುಗಳಿರಲು
ತಪ್ಪು ಕಲ್ಪನೆ ಬಿಡಬೇಕು
ಅತ್ತಿತ್ತ ಎತ್ತತ್ತ ಹೋದರು ನೀನು
ನ್ಯಾಯದ ಪರವೇ ಇರಬೇಕು
ಗಿಡುಗನ ದೃಷ್ಟಿಯು ಅದೆಂತಹ ಸೃಷ್ಟಿ
ಬೇಟೆಯು ಎಂದೂ ತಪ್ಪದು
ಜನನ ಅಂದಾಗ ಅದೆಷ್ಟೋ ಸಂತಸ
ಮರಣದ ದುಃಖವು ಇರುವುದು.
ಬಾಳಿನ ಸಂತೆಯಲಿ ಮಾರಾಟಗಾರನ
ಅಳತೆಗೂ ಸಿಗದ ಹೆಜ್ಜೆಗಳು
ಹರಿಯುವ ನದಿಯಲ್ಲಿ ತೇಲುವ ದೋಣಿ
ಪ್ರೀತಿಯು ಜೊತೆಗೆನೇ ಇರಬೇಕು
ಮಣ್ಣಿನ ಸೃಷ್ಟಿ ಮಣ್ಣನ್ನೇ ತಿಂದು
ಮರಳಿ ಮಣ್ಣಿಗೆ ಹೋಗುವುದು
ಮಣ್ಣಿನ ಸತ್ವ ಮನುಜನ ಬೆಳಸಿ
ಮಣ್ಣು ಶಕ್ತಿಯ ಮೆರೆಯುವುದು
ಮನ್ಸೂರ್ ಮುಲ್ಕಿ