ಧಾರಾವಾಹಿ
ಭಾರತಿ ಸಂ ಕೋರೆ
ಆರನೆ ಕಂತು
ಪ್ರೀತಿಯ ಪಯಣ
ಮರುದಿನದ ಭೇಟಿಗಾಗಿ
ದೇವಕಿ ಮತ್ತು ರಾಜ ಇಬ್ಬರು ಎಂದಿನಂತೆ ತಮ್ಮ ತಮ್ಮ ಕೆಲಸ ಮುಗಿಸಿಕೊಂಡು ಸಂಜೆ ಫ್ರೀ ಆಗುತ್ತಾರೆ.
ಇವರಿಬ್ಬರ ಪ್ರೀತಿಯಲ್ಲಿ ಕಾಳಜಿ,ಸಹಾನುಭೂತಿ, ನಿಸ್ವಾರ್ಥತೆಯ ಭಾವನೆಗಳು ಎದ್ದು ಕಾಣುತ್ತಿದ್ದವು. ಇಬ್ಬರು ಸುಖ ಮತ್ತು ದುಃಖವನ್ನು ಸಮನಾಗಿ ಹಂಚಿಕೊಳ್ಳುವಷ್ಟು ಹತ್ತಿರವಾಗಿದ್ದರು. ಅದಕ್ಕೆ ಹೇಳುತ್ತಾರೆ ಪರಸ್ಪರ ಪ್ರೀತಿಸುವವರಲ್ಲಿ ನೋವು ನಲಿವುಗಳನ್ನು ಸಮವಾಗಿ ಸ್ವೀಕರಿಸುವ ಸಾಮರ್ಥ್ಯವು ಇರುತ್ತದೆ.
ಮೊದ ಮೊದಲು ದೇವಕಿಗೆ ಆಫೀಸ್ ಸಮಯ ಮುಗಿದ ಮೇಲೆ ರೂಂ ನಲ್ಲಿ ಕಾಲ ಕಳೆಯಲು ಬಹಳ ಬೇಸರವಾಗುತ್ತಿತ್ತು.
ದೇವಕಿಗೆ ರಾಜನ ಜೊತೆ ಪರಿಚಯ ಆದ ನಂತರ, ಬದುಕು ಏಷ್ಟು ಸುಂದರ ಎನಿಸತೊಡಗಿತು. ಓದುವ,ಬರೆಯುವ ಪ್ರತಿ ಅಕ್ಷರದಲ್ಲಿ ರಾಜನೇ ಕಾಣತೊಡಗುತ್ತಾನೆ. ಫೋನ್ ಕರೆಗಳು ಅವನದೇ ಎನ್ನುವ ಒಂದು ಭ್ರಮೆ. ಪ್ರತಿ ನಿಮಿಷಕ್ಕೊಮ್ಮೆ ವಾಟ್ಸಾಪ್ ಸಂದೇಶ ನೋಡುವ ಗೀಳು ಶುರುವಾಗುತ್ತೆ.
ಮೊದಲು ಒಬ್ಬಳೇ ಅಂತ ತುಂಬಾ ಬೇಜಾರು ಆಗುತ್ತಿತ್ತು ದೇವಕಿಗೆ. ಒಬ್ಬಳೇ ಇದ್ದಾಗ ಮೌನದಲ್ಲಿ ರಾಜನ ಕಾಣುವ ಸಿಹಿಗನಸು ಕಾಣುತ್ತಿದ್ದಳು ದೇವಕಿ. ಅದೇ ರೀತಿ ರಾಜನಿಗೂ ಕೂಡ ಅದೇ ಆತುರ,ಕಾತುರ. ರಾಜನಿಗೆ ದೇವಕಿಯ ಸೌಂದರ್ಯ, ಆಕರ್ಷಕ ಮೈಮಾಟ, ಅವಳ ಕನ್ನೋಟ, ಇವೆಲ್ಲ ರಾಜನ ಹೃದಯದಲ್ಲಿ ಸೆರೆಯಾಗಿದ್ದವು. ದೇವಕಿ ಮತ್ತು ರಾಜ ಇಬ್ಬರು ಬಿಟ್ಟು ಇರಲು ಸಾಧ್ಯವೇ ಇಲ್ಲ ಎನ್ನುವಷ್ಟು ಹತ್ತಿರವಾಗಿದ್ದರು.
ಆಸೆ,ಆಕಾಂಕ್ಷೆ,ಭಾವ, ಅನುಭಾವ ಸಂಬಂಧಗಳು ಅದರ ನಡುವೆ ಅವರ ಹೊಂದಾಣಿಕೆಯ ಅರಿವಿನ ಕೊರತೆ ಇಲ್ಲದೆ ಸಾಗುತ್ತಿತ್ತು.
ರಾಜನು ತನ್ನ ಕುಟುಂಬದ ಬಗ್ಗೆ ಮಾತ್ರ ಹೇಳಿದ್ದ. ಅವನ ಉದ್ಯೋಗದ ಪೂರ್ಣ ಪರಿಚಯ ಹೇಳಿರಲಿಲ್ಲ. ಯಾವಾಗ ದೇವಕಿ ರಾಜನಿಗೆ 1 ಪ್ರಶ್ನೆ ಮಾಡುತ್ತಾಳೋ ಅವಾಗ ಭೇಟಿ ಆದಾಗ ಒಂದೊಂದರಂತೆ 1 ಬೈ 1 ಹೇಳುತ್ತಾ ಹೋಗುತ್ತಾನೆ.
ಬಿಜ್ ನೆಸ್ ಇದೆ ಅಂತ ಅಷ್ಟೇ ಹೇಳಿದ್ದ. ಆದರೆ ರಾಜ ಕೋಟ್ಯಾಧಿಪತಿ ಅಂತ ದೇವಕಿಗೆ ಗೊತ್ತೇ ಇರಲಿಲ್ಲ.
ಆದರೆ ರಾಜ ತನ್ನ ಶ್ರೀಮಂತಿಕೆಯನ್ನು ಬಹಿರಂಗವಾಗಿ ತೋರಿಸಿಕೊಳ್ಳದೆ, ಭಾವನಾತ್ಮಕವಾಗಿ ಅನ್ಯೋನ್ಯತೆಯಿಂದ ರಾಜ ದೇವಕಿ ಜೊತೆ ಇರುತ್ತಿದ್ದ. ಇಷ್ಟೊಂದು ಶ್ರೀಮಂತನಾದರೂ ಸಹ ಸ್ವಲ್ಪವೂ ಜಂಭವಿಲ್ಲದೆ ದೇವಕಿಗೆ ಬಹಳ ಗೌರವ ಕೊಡುತ್ತಿದ್ದ.
ಪರಸ್ಪರ ಪ್ರಶಂಸೆ ಮಾಡಿಕೊಳ್ಳುತ್ತಿದ್ದರು.
ಕಾಲ ಎಸ್ಟೇ ಬದಲಾದರೂ ಪ್ರೀತಿಯ ಸೆಳೆತದಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ.
ಪ್ರೀತಿಸುವ ಇಬ್ಬರ ನಡುವೆಯೂ ಪ್ರೀತಿಯೂ ಸಮಾಂತರ ಭಾವನೆಗಳು ಇರಬೇಕೆಂದಿಲ್ಲ. ಒಬ್ಬರ ಪ್ರೀತಿ ಪ್ರಾಮಾಣಿಕವಾಗಿ ಇದ್ದರು ನಮ್ಮನ್ನು ಪ್ರೀತಿಸುವವರು ಪ್ರಾಮಾಣಿಕವಾಗಿ ಇರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ.
ಆದರೆ ದೇವಕಿ ಮತ್ತು ರಾಜನ ಇಬ್ಬರ ಪ್ರೀತಿ ಪರಸ್ಪರ ಸತ್ಯ,ನಂಬಿಕೆ, ಪ್ರಾಮಾಣಿಕವಾಗಿ ಇತ್ತು ಎನ್ನುವುದಕ್ಕೆ ಒಂದು ಉದಾಹರಣೆ….. ಕಾರಣಾತಂರದಿಂದ ರಾಜನು 15 ದಿನಗಳವರೆಗೆ ಬಿಸ್ ನೆಸ್ ವಿಷಯವಾಗಿ ಅವರ ಅಣ್ಣನ ಜೊತೆಗೆ ಹೋಗಬೇಕಾದಂತಹ ಒಂದು ಸಂದರ್ಭ. ಇಬ್ಬರ ಮಾತು ಇಲ್ಲ, ಒಬ್ಬರನೊಬ್ಬರು ನೋಡುವುದು ಇಲ್ಲ, ಒಂದು ಸಂದೇಶವು ಇಲ್ಲ. ಇಂತಹ ಒಂದು ಸತ್ವ ಪರೀಕ್ಷೆಯ ಸಂದರ್ಭ ದೇವಕಿಗೆ ಬರುತ್ತೆ. ಹೋಗುವಾಗ ರಾಜನು ಭೇಟಿಯಾಗಿ ಹೇಳಿ ಹೋಗಿರುತ್ತಾನೆ. ಆದರೂ ಸಹ ದೇವಕಿಗೆ ರಾಜನನ್ನು ನೋಡದೆ,ಬಿಟ್ಟಿರಲು ಸಾಧ್ಯವಾಗದಂತಹ ಆ ದಿನಗಳು. ರಾಜನು ಕಾಲ್ ಮಾಡುವುದು ಬೇಡ ಬಿಡಿ. ರಾತ್ರಿ ಮಲಗುವಾಗ ಮೆಸೇಜ್ ಮದುತ್ತಾನೆ ಎಂದು ದೇವಕಿ ಕೈಯ್ಯಲ್ಲಿ ಮೊಬೈಲ್ ಹಿಡಕೊಂಡು ಕೊತಿರುತ್ತಾಳೆ. ರಾಜನು ಒಂದು ರಾತ್ರಿ ವಾಟ್ಸ್ ಪ್ ನಲ್ಲಿ ಇರುವುದನ್ನು ನೋಡಿ ತಾನೇ ಮೆಸೇಜ್ ಮಾಡುತ್ತಾಳೆ. ಆದರೆ ಅವಳ ಯಾವ ಮೆಸೆಜ್ ಗು ರಿಪ್ಲೈ ಕೊಡುವುದಿಲ್ಲ. ಆಗ ಮತ್ತೆ ಮರುದಿನ ರಾತ್ರಿ ಮತ್ತೆ ರಾಜನು ಆನ್ಲೈನ್ ಇರುವುದನ್ನು ಕಂಡು ವಿಡಿಯೋ ಕಾಲ್ ಮಾಡುತ್ತಾಳೆ. ಅವಾಗ ಅವರ ಅಣ್ಣ ಇದ್ದ ಕಾರಣ ರಾಜನು ಅವಳ ನಂಬರನ್ನು ಬ್ಲಾಕ್ ನಲ್ಲಿ ಹಾಕುತ್ತಾನೆ. ಅದನ್ನು ನೋಡಿ ದೇವಕಿಗೆ ಭೂಮಿಯೇ ಬಾಯಿ ಬಿಟ್ಟಂತೆ ಆಗುತ್ತದೆ. ದೇವಕಿಗೆ ಆಫೀಸ ಕಡೆಗೂ ಚಿತ್ತವಿಲ್ಲದೆ, ಇತ್ತ ಮನೆಯಲ್ಲೂ ಚಿತ್ತವಿಲ್ಲದೆ,ಸರಿಯಾಗಿ ಊಟ,ನಿದ್ದೆ ಇಲ್ಲದೆ ರಾಜನ ಧ್ಯಾನದಲ್ಲಿ ಕುಗ್ಗಿ,ಸೊರಗಿ ಹೋಗಿದ್ದಳು.ದೇವಕಿಯ ಮನದಲಿ ನೂರಾರು ಪ್ರಶ್ನೆಗಳು ಕಾಡತೊಡಗಿದವು. ಯಾಕೆ ಹೀಗೆ ಮಾಡಿದರು? ನಾನು ಬೇಡವಾದೆನಾ ರಾಜನಿಗೆ?? ಎಂದು ಯೋಚನೆ ಮಾಡಿ ಮಾಡಿ ತುಂಬಾ ವೀಕ್ ಆಗಿದ್ದಳು ದೇವಕಿ. ಇಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು ದೇವಕಿಯ ಮುಂದೆ ಅಂದರೆ ಅವರ ಮನೆಯಲ್ಲಿ ಗಂಡು ನೋಡುವುದು ಒಂದು ಶುರುವಾಗಿತ್ತು.ಇವಳು ತುಂಬಾ ವೀಕ್ ಆಗಿದ್ದು ನೋಡಿ ಹಾಸ್ಪಿಟಲ್ ಗೆ ತೋರಿಸಿ,2 ಸಲಾಯಿನ್ ಕೂಡ ಹಚ್ಚಿಸಿದರು. ನನಗೆ ಈಗಲೇ ಮದುವೆ ಬೇಡ ಅಂತ ಕೂಡ ಹೇಳುತ್ತಾಳೆ ದೇವಕಿ ತಂದೆ ತಾಯಿಗೆ. ಅವಾಗ ರಾಜನು 15 ದಿನಗಳು ಅಂತ ಹೇಳಿ ಹೋಗಿರುತ್ತಾನೆ. ಅದನ್ನೇ ಲೆಕ್ಕ ಹಾಕುತ್ತ ಕುಳಿತ ದೇವಕಿ 15 ನೆಯ ರಾತ್ರಿ ಕೂಡ ದಾರಿ ಕಾಯುತ್ತಾಳೆ.ಆದರೆ ರಾಜನ ಕಡೆಯಿಂದ 1 ಕಾಲ್ ಕೂಡ ಬಾರದೆ ಇದ್ದಾಗ, ಪುನಃ ರಾಜನಿಗೆ ಕಾಲ್ ಟ್ರೈ ಮಾಡುತ್ತಾಳೆ. ಆಗಲು ಸಹ ಇವಳ ಕಾಲ್ ನಂಬರ್ ಮತ್ತು ವಾಟ್ಸಾಪ್ ಇನ್ನು ಬ್ಲಾಕ್ ಇರುತ್ತೆ..ಮತ್ತೆ ಟೆನ್ಸ್ ಶನ್ ಶುರುವಾಗುತ್ತೆ ದೇವಕಿಗೆ. ಜೀವ ಹೋದಂತಹ ಅನುಭವ ಆಗುತ್ತದೆ. ಆಮೇಲೆ ಅವಳು ಬೇರೆ ಒಬ್ಬರ ನಂಬರ್ ನಿಂದ ಕಾಲ್ ಮಾಡಿದಾಗ ರಾಜನು ಹಲೋ ಅಂದಾಗ ಹೋದ ಜೀವ ಬಂದಂತೆ ಆಗುತ್ತದೆ. ಎಲ್ಲಿದೀರಾ?ಯಾಕ್ ಹೀಗೆ ಬ್ಲಾಕ್ ಮಾಡಿದಿರಾ? ಎಂದು ಹಲವಾರು ಪ್ರಶ್ನೆಗಳ ಸುರಿಮಳೆ ಸುರಿಸಿ ಅಳುತ್ತ ಇರುತ್ತಾಳೆ. ಆಗ ರಾಜನು ಸಂಜೆ ಭೇಟಿಯಾದಾಗ ಹೇಳುವೆ ಎಂದು ಫೋನ್ ಇಡುತ್ತಾನೆ. ಆ ಒಂದು ಕಹಿ ಘಟನೆ ಇಂದಿಗೂ ಸಹ ದೇವಕಿ ಮರೆತಿಲ್ಲ.ಆ ಒಂದು ಕೆಟ್ಟ ಘಳಿಗೆ,ಕೆಟ್ಟ ದಿನ ಅದಾಗಿತ್ತು…
ಮುಂದುವರೆದ ಭಾಗ ಮುಂದಿನ ಮಂಗಳವಾರ ನೋಡೋಣ..
ಭಾರತಿ ಸಂ ಕೋರೆ
ಭಾರತಿ ಸಂ ಕೋರೆ.
(ಲೇಖಕರು.ಸಾಹಿತಿಗಳು.
ಅಂಕಲಿ ಬೆಳಗಾವಿ ಜಿಲ್ಲೆ) ಇವರು ಪ್ರತಿಷ್ಠಿತ ಕೆ.ಎಲ್. ಇ ಸಂಸ್ಥೆಯ ಸಿ.ಎಸ್.ಕಿತ್ತೂರು ಪ್ರೌಢಶಾಲೆ ಅಥಣಿಯಲ್ಲಿ ಶಿಕ್ಷಕಿಯಾಗಿ ಒಂಬತ್ತು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಶಿಕ್ಷಣ (ಫ್ಯಾಷನ್ ಡಿಸೈನರ್) ಎಂ.ಎ.ಬಿ ಇಡಿ. ಇವರು ಶಾಲೆಯಲ್ಲಿ ಹಂಚಿಕೊಂಡ ಶಾಲಾ ವಿಭಾಗಗಳು – 04
ಸಾಹಿತ್ಯ ಕ್ಷೇತ್ರ ಮತ್ತು ಸಂಘಗಳು – 08 ಇವರ ಪ್ರಕಟಿತ ಕೃತಿ – 01(ಶಾರದಾ ಪ್ರಭೆ ಡಾ.ಪ್ರಭಾಕರ ಕೋರೆಯವರ ಕುರಿತು)
ಬಿಡುಗಡೆ ಹಂತದಲ್ಲಿರುವ ಕೃತಿಗಳು – 02
ಇವರ ಆಸಕ್ತಿ : ಕಥೆ,ಕವನ,ಕಾದಂಬರಿ ಬರೆಯುವುದು,ಓದುವುದು, ಸಂಗೀತ,ನೃತ್ಯ,ಚಿತ್ರಕಲೆ ಮುಂತಾದವು.
ಇನ್ನು ಇವರನ್ನು ಅರಸಿ ಬಂದ ಪ್ರಶಸ್ತಿಗಳು
04 ರಾಜ್ಯ ಪ್ರಶಸ್ತಿಗಳು
03 ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.
ಭಾರತಿ ಕೋರೆಯವರು ಶಿಕ್ಷಕ ವೃತ್ತಿಯ ಜೊತೆಗೆ ನುಡಿ ಮುತ್ತುಗಳು,ಹನಿಗವನ,ಅಂಕಣ ಬರಹ ಮುಂತಾದವುಗಳನ್ನು ಬರವಣಿಗೆಯ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
Super teacher