ಶಾಲಿನಿ ಕೆಮ್ಮಣ್ಣುಕವಿತೆ ಮಾತು – ಮೌನ

ಮೌನ ಬರಿದಲ್ಲ
ಅಭಿವ್ಯಕ್ತಿಗಳ ಮಹಾಪೂರ

ಮೌನ ಪದಗಳಿಗೆ ಅತೀತ
ಸುಶ್ರಾವ್ಯ ಸಂಗೀತ

ಮೌನ ಸೌಮ್ಯ ಸುಂದರ
ಗಾಢ ಶುಭ್ರ ಗಂಭೀರ

ಮೌನ ನಿಖರ
ಸಕಲ ಪ್ರಶ್ನೆಗಳ ಸಮರ್ಥ ಉತ್ತರ

ಮೌನ ಅಮಿತ
ಅನಂತದ ಆಭಾಸ

ಮೌನ ನೆಮ್ಮದಿಯ ಆಲಯ
ಮನಸ್ಥೈರ್ಯದ ಪ್ರಾಬಲ್ಯ

ಮೌನ ಶಾಂತಿಯ ನೆಲೆ
ಏಕಾಗ್ರತೆಯ ಸೆಲೆ

ಮೌನ ಜಿಜ್ಞಾಸೆ
ಸೂಚ್ಯದ ಭರವಸೆ

ಮೌನ ಅದ್ಭುತ ಜ್ಞಾನ ಯೋಗ
ಭಾವಗಳ ಸ್ಪಷ್ಟ ಸಂಯೋಗ

ಮೌನದಿಂದ ಸ್ವಯಂ ನಿಯಂತ್ರಣ
ಸೃಜನಶೀಲತೆಯ ಪರಿಕಲ್ಪನೆ ಮೌನ

ಬುದ್ಧನ ಧ್ಯಾನ ಮೌನ
ಕೃಷ್ಣನ ಪ್ರೇಮ ಸಂಧಾನ ಮೌನ
ಶಿವನ ಸನ್ನಿಧಾನ ಮೌನ

ಮೌನವು ಶ್ರೇಷ್ಠ ವಾಗ್ವೈಖರಿ
ತನು ಮನಗಳ ಪರಿಶುದ್ಧತೆಗೆ ಗರಿ
ಜೈವಿಕ ದೈವಿಕ ಪರಂಧಾಮದ ಗುರಿ

ಮೌನ ಬರಿದಲ್ಲ
ಅಭಿವ್ಯಕ್ತಿಗಳ ಮಹಾಪೂರ


Leave a Reply

Back To Top