ಕಾವ್ಯ ಸಂಗಾತಿ
ಎಂ.ಬಿ.ಸಂತೋಷ್
ಚುಟುಕುಗಳು
ನೂರಾರು ಚುಕ್ಕಿಗಳನ್ನಿಟ್ಟು
ರಂಗೋಲಿ ಬಿಡಿಸುವ
ಆ ಚೆಂದದ ಚೆಲುವೆಯ ಹಣೆಯಲ್ಲಿ
ನಗುವ ಕುಂಕುಮದ ಬೊಟ್ಟಿಲ್ಲ
ಹದಿನಾರರ ಎಳೆ ಬಾಲೆ ಅವಳು
ಅರವತ್ತರ ಮುದಿ ಶ್ರೀಮಂತ ಇವನು
ನಿಲ್ಲುವುದೆಂತು ಇಂಥ ಸಂಬಂಧ
ಆದರೂ ನಡೆಯಿತಲ್ಲ ಇಂದು
ಅವಳ ಸೀಮಂತ
ಮಡದಿಗೆ ಕೊಟ್ಟರೆ ಸಲುಗೆ
ಆಗೋದೇ ಹೀಗೆ
ಪರಶಿವನ ತಲೆಯ ಮೇಲೇರಿ
ಗಂಗೆ ಕುಳಿತ ಹಾಗೆ!
ಕೊಳ್ಳಲಿಲ್ಲ ಹಬ್ಬಕೆಂದು
ನಾ ಹೊಸ ಬಟ್ಟೆ
ತುಂಬಿದ್ದರೆ ತಾನೇ ನನ್ನೀ
ಗೇಣು ಹೊಟ್ಟೆ
ಹಣ, ಆಸ್ತಿ ಎಷ್ಟಿದ್ದರೇನು
ಕಾಲನ ಕರೆ ಬಂದಾಗ
ಬರೀಗೈಯಲ್ಲಿ ಹೋಗುವುದನ್ನ
ಮನುಜ ನೀ ಮರೆತೆಯೇನು?
ವಯಸ್ಸಾಯಿತು ನಮಗೆಂದು
ನೀ ಚಿಂತಿಸುವುದೇತಕ್ಕೆ ನಲ್ಲೆ?
ಮರೆಯದಿರು ನಿಜ ಪ್ರೀತಿ
ಅರಳುವುದು ಈ ಹೊತ್ತಲ್ಲೇ
ಯಾರಿಗೂ ತಿಳಿಯದ ಹಾಗೆ
ಗೆಳತಿಯ ಮನಸ್ಸು ಕದ್ದೆ
ಕೊನೆಗೆ ನಾನಲ್ಲೇ
ಅವಳಿಗೆ ಸಿಕ್ಕಿಬಿದ್ದೆ
ಪ್ರೀತಿ -ಪ್ರೇಮ -ಪ್ರಣಯ
ಕವಿಯ ಕಲ್ಪನೆಗೆ ಸಿಲುಕಿದ್ದು
ಕಾಮ -ಕ್ರೋಧ -ಮತ್ಸರ
ವಿಕೃತ ಕಾಮಿಗೆ ದಕ್ಕಿದ್ದು
————————————
ಎಂ. ಬಿ. ಸಂತೋಷ್
ಚುಟುಕುಗಳು ಮೆಲಕು ಹಾಕುವಂತಿವೆ.
ತುಂಬಾ ಸೊಗಸಾದ ಹನಿಗವನಗಳು