ಕಾವ್ಯ ಸಂಗಾತಿ
ಬಾಗೇಪಲ್ಲಿ
ಗಜಲ್
ಇಂಗಿತಗಳ ಅರಿಯದ ಬೆಪ್ಫ ನಾನು ಅವ್ವೆನಗೆ ಕಿವಿ ಚುಚ್ಚಿಲ್ಲ
ಪಿಸುಗುಟ್ಟು ಕೇಳಿಸದ ಕೆಪ್ಪ ನಾನು ಅವ್ವೆನಗೆ ಕಿವಿ ಚುಚ್ಚಿಲ್ಲ
ಕಪಟಿಯಲ್ಲ ಅಷ್ಟೇ ಸಾಕು ಎನಗೆ ಹೊತ್ತಿನೂಟವ ಬಿಟ್ಟು ನಾ ಬೇಡೆನು
ನಂಬಿದವರ ಕೈ ಬಿಡದ ತೆಪ್ಪ ನಾನು ಅವ್ವೆನಗೆ ಕಿವಿ ಚುಚ್ಚಿಲ್ಲ
ಆಡಂಬರದ ಮಾತೆನೆಗೆ ಬಾರದು ಸಜ್ಜನಿಕೆ ನುಡಿ ಕಿವಿಗೆ ತಂಪು
ವಿರಳ ಅಲ್ಪರಲಿ ಬಹಳ ಅಲ್ಪ ನಾನು ಅವ್ವೆನಗೆ ಕಿವಿ ಚುಚ್ಚಿಲ್ಲ
ಎಪ್ಪತ್ತು ವರ್ಷಕಂಡ ಯುವಕ ಐವತ್ತು ವರ್ಷ ಅನಭವವಿದೆ
ಎರಡು ಹೆಣ್ಣು ಮಕ್ಕಳ ಅಪ್ಪ ನಾನು ಅವ್ವೆನಗೆ ಕಿವಿ ಚುಚ್ಚಿಲ್ಲ
ಕೃಷ್ಣಾ! ಹಂಸದ ಸಂಗ ಇರೆ ಕೊಕ್ಕರೆ ಹಂಸವಾದೀತೇ ಎಂದಿಗೂ
ಬೆರಕೆ ಇಲ್ಲದ ಹಸುವಿನ ತುಪ್ಪ ನಾನು ಅವ್ವೆನಗೆ ಕಿವಿ ಚುಚ್ಚಿಲ್ಲ.
ಬಾಗೇಪಲ್ಲಿ