ಸುಧಾ ಪಾಟೀಲ ಕವಿತೆ ನೀನೇ ನನ್ನ ಬೆಳಕು

ಮನದ ಅಂಧಕಾರದ
ಪರದೆಯ ಸರಿಸಿ
ಹೊರಗಣ ಜಗವ
ಪರಿಚಯಿಸಿದ
ವಾಸ್ತವವನ್ನು
ತಿಳಿಹೇಳಿ ಅದ
ಎದುರಿಸುವ
ತಾಕತ್ತಾದ ನೀನೇ
ನನ್ನ ಬೆಳಕು

ದುಗುಡಗಳ ಬದಿಗೊತ್ತಿ
ಅಧೈರ್ಯದ ಭೀತಿಯನ್ನು
ಕಿತ್ತೆಸೆದು
ನನ್ನ ನೆಲೆಯನ್ನು
ನನಗೇ ತಿಳಿಸಿಕೊಟ್ಟ
ನೀನೇ ನನ್ನ ಶಕ್ತಿ

ಜಿಜ್ಞಾಸೆಯ ಹಾದಿಯಲ್ಲಿ
ಪರಿವರ್ತನೆಯ ಮಾರ್ಗದಿ
ಅಚಲಳಾಗುವಂತೆ
ಸಿದ್ಧಗೊಳಿಸಿದ
ನೀನೇ ನನ್ನ ಯುಕ್ತಿ

ನನ್ನನ್ನು ನನಗೇ
ಪರಿಚಯಿಸಿದ
ಒಳಗಣ
ಶಕ್ತಿಯ ಸದ್ಭಳಕೆ
ಮಾಡಿ
ಮೇರು ಪರ್ವತವನ್ನೇ
ಎತ್ತಲು
ಸ್ಫೂರ್ತಿ ತುಂಬಿದ
ನೀನೇ ನನ್ನ ಬೆಳಕು


2 thoughts on “ಸುಧಾ ಪಾಟೀಲ ಕವಿತೆ ನೀನೇ ನನ್ನ ಬೆಳಕು

Leave a Reply

Back To Top