ಡಾ.ಡೋ.ನಾ.ವೆಂಕಟೇಶ ಅವರ ಕವಿತೆ-ಇವ ನಮ್ಮವ

ತಾನಷ್ಟೆ ಬುದ್ಧಿವಂತ

ಅವ ಬುದ್ಧಿಮಂಕ ಎಂದೆಲ್ಲ ಭ್ರಮಿಸುತ್ತಾನೆ ನಮ್ಮ ಪ್ರಕಾಂಡ
ಪಂಡಿತೋತ್ತಮ
ಬೆಲೆ ಕಟ್ಟಿ
ತನ್ನ ತಲೆಗೆ ಸಾವಿರ ವರಹ

ಸಂಭ್ರಮಿಸುತ್ತಾನೆ ಆಧುನಿಕ!
ಬೇರೆ ತಲೆಗಳ ಬೆಲೆ ತಿಳಿಯದ
ತಲೆ ತಿರುಕ!

ಅತ್ಯಾಧುನಿಕ
ತನ್ನ ನೆರಳಿಗೆ ಮಾತ್ರ
ಗೆಳೆಯ-
ಕುಬುದ್ಧಿ ಪಂಜರದೊಳಕ್ಕೆ
ಗಿಳಿ
ಬೌದ್ಧಿಕ ಮೌಲ್ಯಗಳಿಗೆ
ದಿವಾಳಿ!

ತನ್ನ ಜೀನ್ಸುಗಳ, ತನ್ನ ತಾಯಂದಿರ ಬೇರುಗಳ
ಚಿವುಟುತ್ತ ಬರೆ ಬರೇ
ವಿತಂಡವಾದ ಮಾಡುತ್ತ
ಅವಕಾಶವಾದ ನಡೆಸುತ್ತಾನೆ
ಆಕಾಶದುದ್ದಕ್ಕೂ ಮೆರೆಯುತ್ತಾನೆ!
ಕನಸಲ್ಲೆ ವಿಹರಿಸುತ್ತಾನೆ

ಕಳಚಿ ಕೊಂಡಂತೆ ನಟಿಸುತ್ತಾನೆ
ಊಸರವಳ್ಳಿ ತನ್ನ
ಕರುಳ ಬಳ್ಳಿ!
ಮುಟ್ಟಿದರೆ ಮುನಿಯುತ್ತಾನೆ
ಮುರುಟಿ ಹೋಗುತ್ತಾನೆ!

ಆದರೂ
” ಇವ ನಮ್ಮವ,ಇವ ನಮ್ಮವ,ಇವ ನಮ್ಮವನಯ್ಯ”
ನಮ್ಮ ನಿಮ್ಮ ನೆರೆ ಹೊರೆಯವ!

ನೆರೆ ಬಂದಾಗ
ಹೊರೆಯಾಗುವವ!
ನಮ್ಮ ನೆರಳಿಗೇ ಜೋತು
ಬೀಳುವವ!!


6 thoughts on “ಡಾ.ಡೋ.ನಾ.ವೆಂಕಟೇಶ ಅವರ ಕವಿತೆ-ಇವ ನಮ್ಮವ

  1. “ಇವ ನಮ್ಮವ” ಎಂಬ ಶೀರ್ಷಿಕೆಯ ನಿಮ್ಮ ಇಂದಿನ ಕವನ, ಹೊರಲಾರದ ಅತಿ ಭಾರ ತಲೆ ಹೊತ್ತ ಚಟದ ತುರಿ ಮೆತ್ತಿಕೊಂಡು ಬೀಗುವಂಥ ಅತಿ ಮಹಾತ್ಮರ ಬಗ್ಗೆ ಒಂದು ವಿಡಂಬನಾತ್ಮಕ ತಿವಿತ! ನಡೆಯುತ್ತಿರಲಿ ನಿಮ್ಮ ಕಾವ್ಯ ಪಯಣ…

    1. ಧನ್ಯವಾದಗಳು ಮೂರ್ತಿ. You always catch that gist of what’s happening around us!
      Thanq again

  2. ಇಂತಹ ಅರ್ಥಪೂರ್ಣ ಕವನ ಹೊರತಂದ ನೀವು ನಿಜಕ್ಕೂ ಪುಣ್ಯವಂತರು. ಜೈ ಶ್ರೀ ರಾಮ್

  3. ಮಂಜಣ್ಣ ತುಂಬಾ ಧನ್ಯವಾದಗಳು!
    ನಿಮ್ಮ ಪ್ರೋತ್ಸಾಹ ಯಾವಗಲೂ ಶ್ರೀರಕ್ಷೆ
    Thank you!

Leave a Reply

Back To Top