ಡಾ. ಅರಕಲಗೂಡು ನೀಲಕಂಠ ಮೂರ್ತಿ ಗೆಳೆಯ ನೀ ಕವಿಯಾಗಿ

ಗೆಳೆಯ ನೀ ಕವಿಯಾಗಿ
ಕವಿತೆ ಬರೆಯಲೇಬೇಕು ಬರಿ

ನನ್ನ ನಿನ್ನಂಥ ಜನರ ಥರ
ಫುಟ್ ಪಾತಿನ ಮೇಲೆ
ಫುಟ್ ಪಾತಿಲ್ಲದ ರಸ್ತೆಯಂಚಿನಲಿ
ದಿನಂಪ್ರತಿ ಜನಜಂಗುಳಿ ನಡುವೆ
ನುಸುಳಿಕೊಂಡು ನಿಧಾನವಾಗಿ
ಅಥವ ಕೆಲವೊಮ್ಮೆ ಸರಸರ
ಹಾವಿನ ಥರ ಹರಿದೋಡುವ
ಜನಸಾಮಾನ್ಯರ ಹಾಗೆ!

ಅಂದಿನ ಜರಿಪೇಟ
ಇಂದಿನ ಟೈ ಸೂಟು
ಯಾವುದರ ಹಂಗೂ ಇಲ್ಲದೆ
ಒಂದು ಲುಂಗಿ ಟೀ ಷರಟು
ಅಥವ ಪ್ಯಾಂಟು ಷರಟು
ಅಥವ ಟೀ ಮತ್ತು ಪ್ಯಾಂಟು
ಇಲ್ಲ ಇಂದಿನ ಪ್ರವೃತ್ತಿಯ ಚಡ್ಡಿ
ಅಂಥ ಕವನಗಳ ಅವಶ್ಯ ಬರಿ
ಎಲ್ಲಕ್ಕು ಜೇಬೊಂದಿರಲಿ
ಪೆನ್ನು ಪೆನ್ಸಿಲ್ಲಿಗೆ!

ಅವರವರ ದಿನದಿನದ
ಬದುಕಿಗಾಗಿ
ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ
ದುಡಿವ ಧಾವಂತ
ಎದೆಯೊಳಗೆ ದುಡಿದುಡಿಸಿ
ಎಂಥದೋ ಇರಬಾರದ
ಅರ್ಜೆಂಟಿದ್ದವರ ಥರ
ಅಡ್ಡಾಡುವ ಮಧ್ಯಮ ಜನರ ಹಾಗೆ
ಬರೆಯಬೇಕುಕವಿತೆ
ಥಟ್ಟಂತ ಎಲ್ಲರೂ
ಹೋ ಎನ್ನುವಂತೆ
ಅಕ್ಷರ ಅರಿಯದ ಅಮಾಯಕ
ಕೂಡ ಓದಿಸಿಕಂಡು
ಅರ್ಥ ಮಾಡಿಕೊಂಡು
ಖುಷಿಯಿಂದ ಬೀಗುವ ಹಾಗೆ
ಸಂಕೀರ್ಣಗಳ ಮುಕ್ತಿಯಿಂದ
ಕ್ಲಿಷ್ಟ ಪದಗಳ ಜಾದೂ ಚಾಟಿಗಳ
ಏಟುಗಳಿಲ್ಲದಂಥ
ಅತಿ ಜನಭರಿತ
ಸಣ್ಣ ಸಣ್ಣ ಕಿರಿದಾರಿಗಳ
ಕಿರಿದಾದ ಗಲ್ಲಿಗಳ ಗೋಜಲಲ್ಲಿ
ನಡೆದಾಡುವಂಥ
ಕವಿತೆ ಬರಿ…!


3 thoughts on “ಡಾ. ಅರಕಲಗೂಡು ನೀಲಕಂಠ ಮೂರ್ತಿ ಗೆಳೆಯ ನೀ ಕವಿಯಾಗಿ

  1. ಗೆಳೆಯ ಮೂರ್ತಿ,
    ಕವಿ ಮತ್ತೊಬ್ಬ ಕವಿಯಲ್ಲಿ ತನ್ನನ್ನೇ ಆಹ್ವಾನಿಸಿ ಕೊಂಡು ಬರೆದ ಕವಿತೆ! ಕವಿ ಒಬ್ಬ ಮಧ್ಯಮವರ್ಗದಿಂದ ಉಧ್ಭವಿಸಿರ ಬೇಕು! ಅದಾದಾಗ ಇಂಥ ನಮ್ಮ ನಿಮ್ಮಂತಹವರ ಅಂತರಾಳದ ಕವನೋದ್ಭವ. ಸಮರ್ಥವಾದ ಉದಾಹರಣೆ ಈ ನಿಮ್ಮ ‘ಗೆಳೆಯ ನೀ ಕವಿಯಾಗಿ’ . ಚೆನ್ನಾಗಿದೆ!
    Congrats,Murthy!

  2. ಗೆಳೆಯ ನೀ ಕವಿಯಾಗಿ..
    ಕವಿಯ ಮನಸ್ಸಿನ ಅಂತರಾಳದ ಬರಹ.. ಸುಂದರ

Leave a Reply

Back To Top