ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮುಂಜಾನೆ ಮಂಜಿನ ಮುಸುಕಿನಲಿ
ಮೋಡದಿಂದಿಳಿವನು
ಮನಗಡಲಲಿ ಮುಳುಗಿ ಮಿರುಗುವ ಮುತ್ತನಾರಿಸುವನು
ಮೊಗಕೆ ಮುತ್ತಿಡುವ ಮುಂಗುರುಳ ಮೋಹಿಸುವನು
ಮೋಹಕ ಮಾತುಗಳಲಿ ಮುದವಿತ್ತು ಮತ್ತೇರಿಸುವನು.

ಮಂಡಿಯೂರಿ ಮನೋಕಾಮನೆಯ ಮಂಡಿಸುವನು
ಮಂದಹಾಸದಿ ಮುಡಿಗೆ ಮೊಲ್ಲೆಮಾಲೆ ಮುಡಿಸುವನು
ಮದರಂಗಿಯ ಮುಂಗೈಗೆ ಮುತ್ತೊತ್ತಿ ಮುಗುಳ್ನಗುವನು
ಮನದನ್ನೆಯ ಮನದಿಚ್ಛೆ ಮನ್ನಿಸಿ ಮಣಿಸುವ ಮಾಹೀರನಿವನು.

ಮುಖಾರವಿಂದವದು ಮಂಕಾಗಿರಲು ಮಧುವಿಹಾರಕೊಯ್ಯುವನು
ಮುನಿಸೇಕೆ ಮನದರಸಿ ಮೌನ ಮುರಿದು ಮಾತಾಡೆನುವನು
ಮಧುವಂತಿಯನಾಲಿಸುತ ಮೂಜಗವ ಮರೆಯೋಣವೆನುವನು
ಮೃದು ಮನಗಳೊಂದಾಗುತ ಮಿಲನ ಮಹೋತ್ಸವವಾಗಲೆನುವನು.


About The Author

4 thoughts on “ಮಧು ವಸ್ತ್ರದ್ಅವರ ಕವಿತೆ-ಮನದಿನಿಯ”

Leave a Reply

You cannot copy content of this page

Scroll to Top