ಡಾ. ಕವಿತಾ ಅವರ ಕವಿತೆ-ಬಣ್ಣಗಳ ಬದುಕು

ಹಲವು ಬಣ್ಣಗಳ ತುಂಬಿಕೊಂಡ ಲೋಕ ಅನಿಸಿತ್ತು ಆನಂದಮಯ…
ಮುಖಕ್ಕೆ ಬಣ್ಣ ಬಳಿಯುವರೆಂದು ತಿಳಿದು ಆಯಿತು ಆರದ ಗಾಯ…

ನನ್ನಂತೆ ಎಲ್ಲರೂ, ಮನಸ್ಸಿನಂತೆ ಮಹಾದೇವ ಎಂದುಕೊಂಡೆ…
ಮನಸ್ಸುಗಳ ದ್ವಿಪಾತ್ರ ಅಭಿನಯ ಕಂಡು ನೊಂದುಕೊಂಡೆ….

ನಿಜರೂಪ ಮರೆಯಾಗಿಸಲು ತೊಡುವರು ವಿವಿಧ ವೇಷ-ಭೂಷಣ…
ಅಡಗಿರುವ ಕೊಳಕು ನೋಡಿ ತಿಂದಂತೆ ಆಯಿತು ಪಾಷಾಣ…

ಮಿತ್ಯವೆ ಸತ್ಯವೆಂದು ಜೀವಿಸುತ್ತಿದ್ದೆ ಹೊತ್ತು ಭ್ರಮೆ…
ಮುಖವಾಡಗಳು ಕಳಚಿದಂತೆಲ್ಲಾ ಅಯಿತು ದಿಗ್ಭ್ರಮೆ…

ನನ್ನ ಬೆನ್ನು ನನಗೆ ಕಾಣುವುದಿಲ್ಲ ಅರಿಯಲು ಬೇಕು ಕನ್ನಡಿ…
ಕನ್ನಡಿಯಂತಿದ್ದವರು ಹೊರಟರು ಬೆನ್ನಿಗೆ ಇರಿದು ಗಾಯ ಮಾಡಿ…


3 thoughts on “ಡಾ. ಕವಿತಾ ಅವರ ಕವಿತೆ-ಬಣ್ಣಗಳ ಬದುಕು

  1. ಮುಖಕ್ಕೆ ಬಣ್ಣ ಹಾಕುವುದು ಬುದುಕಿಗಾಗಿ , ಮನಸ್ಸಿಗೆ ಬಣ್ಣ ಹಾಕಿ ಬದುಕುವುದು ಯಾವುದಕ್ಕಾಗಿ ಎನ್ನುವ ವಾಸ್ತವವನ್ನು ಬಿಚ್ಚಿಟ್ಟ ಕವಿತೆ ಇದು.

  2. ಮುಖವಾಡಗಳ ಬದುಕು
    ಸಾವಿಗು ಹೆದರಿಕೆ ಮುಖವಾಡಗಳ ಧರಿಸಿದ ದೇಹಗಳ ಕರೆದೊಯ್ಯಲು….

    ಚೆಂದದ ಬರಹ ಮೇಡಮ್

Leave a Reply

Back To Top