ಕಾವ್ಯ ಸಂಗಾತಿ
ವಸಂತ್. ಕೆ. ಹೆಚ್
“ನನ್ನ ನಿಲ್ದಾಣ”
ನಾನು, ನನ್ನದೆಲ್ಲವ ಬದಿಗಿಟ್ಟು
ಹೊರಟು ನಿಂತಿರುವೆ
ಕಾಣದ ನಿಲ್ದಾಣಕೆ
ಅಲೆಮಾರಿಯಂತೆ||
ಹರೆಯ ಮಾಗಿದೆ
ಚರ್ಮ ಸುಕ್ಕು ಗಟ್ಟಿದೆ
ಜೀವನದ ಏಳು-ಬೀಳು
ಗಳನ್ನೆಲ್ಲ ಸವಿದು
ಕಾದು ನಿಂತಿರುವೆ
ಸಮಯವೆಂಬ ವಾಹನವ||
ಬೇಸತ್ತು ಹೋಗಿದೆ
ಜೀವನದ ರಸಕವಳವೆಲ್ಲ
ಮುಪ್ಪಿನಂಗಳದಲಿ ಎಲ್ಲಾ
ಹಳಸಿದಂತೆ ಬಾಸವಾಗುತಿದೆ
ತನ್ನವರೆಲ್ಲ ಬಹುದೂರ
ಸಾಗಿಹರು ನನ್ನಿಂದ
ಬರಿ ಮೌನದಲಿ ನಿಂತಿರುವೆ
ನನ್ನ ನಿಲ್ದಾಣ ಬರುವಿಕೆಗಾಗಿ ||
ಎಲ್ಲಾ ಬಂದು ಸೇರುವರು ಅಲ್ಲಿಗೆ
ಒಬ್ಬರ ಹಿಂದೆ ಒಬ್ಬರಂತೆ, ಈಗ
ನನ್ನ ಸರದಿ, ಏನು ಮಾಡಲಿ
ತಡಮಾಡುವ ಹಾಗಿಲ್ಲ
ಕಿಂಕರರಿಬ್ಬರು ಬಂದು
ನಿಂತಿಹರು ನನ್ನೆದುರು
ಹಾಗಾಗಿ ಹೊರಡುವೆ ನನ್ನ ನಿಲ್ದಾಣಕೆ||
ಮತ್ತೆ ಬರುವೆನೆಂದರು
ಬರಲಾಗದು ಇಲ್ಲಿಗೆ,
ಇದ್ದಾಗಲೆ ಎಲ್ಲಾ ಒಳಿತನ್ನ
ಮಾಡಿಬಿಡು ನಿನ್ನ
ಹೆಜ್ಜೆಯ ಗುರುತಾದರು
ಉಳಿಯಲಿ’ ನಾ ಬರುವೆ
ನನ್ನ ನಿಲ್ದಾಣವಿಗ ಬಂದಿದೆ. ||
ವಸಂತ್. ಕೆ. ಹೆಚ್.
❤️
ಚಂದದ ಬರಹ