ಬಿ.ಟಿ.ನಾಯಕ್ ಕವಿತೆ-ಮೆರುಗಿನಜಾತ್ರೆ

ಎಲ್ಲಿ ನೋಡಿದರಲ್ಲಿ ಜನ ಸಂದಣಿಯ ಜಾತ್ರೆ,
ಅಲ್ಲಲ್ಲಿ ಸದ್ದು ಮಾಡುವ ಬುದ್ದಿಜೀವಿ ಜಾತ್ರೆ
ಪುಸ್ತಕ ಲೋಕಕೆ ಮೆರುಗನು ಕೊಡುವ ಜಾತ್ರೆ,
ಚಿಂತನ ಮಂಥನದಿ ಮುಳುಗಿದ ಜಾಣರ ಜಾತ್ರೆ.

ವಿದ್ಯಾ ದೇವಿಯಾರಾಧನೆ ನಡೆಯುವ ಜಾತ್ರೆ,
ಎಲ್ಲರ ತನು ಮನ ತಣಿಸುವ ಚುಂಬಕ ಜಾತ್ರೆ,
ಜಾತಿಜೀವನ ಮೀರಿ ಕಣ್ಮನಗಳ ಸೇರಿದ ಜಾತ್ರೆ,
ಉಭಯ ಕುಶಲೋಪರಿ ಮೆರ್ಗಿನಂಗಳದಿ ಜಾತ್ರೆ.

ತುಂಬು ಹೃದಯಗಳು ಸೇರಿ ಆಚರಿಸುವ ಜಾತ್ರೆ,
ತನ್ಮನದಿ ಎಲ್ಲರೂ ನಲಿವ ವಿಹಂಗಮದೀ ಜಾತ್ರೆ,
ವಿದ್ಯೆಯ ನಿಧಿಯನು ಕೊಂಡೊಯ್ಯುವ ಜಾತ್ರೆ,
ಮರಳಿದ ಮೇಲೆ ಅರಿವ ಮನಕೆ ತಿಳಿಸುವ ಜಾತ್ರೆ.


8 thoughts on “ಬಿ.ಟಿ.ನಾಯಕ್ ಕವಿತೆ-ಮೆರುಗಿನಜಾತ್ರೆ

  1. ಅರಿವಿನ ಮನಕೆ ತಿಳಿಸುವ ಜಾತ್ರೆ- ಪರಿಣಾಮಕಾರಿ ಅಂತ್ಯ. ಅರ್ಥಪೂರ್ಣ.

    1. ಇದು ಅಕ್ಷರ ಜಾತ್ರೆ. ನಿಮ್ಮ ಮನಸ್ಸಿಗೆ ಹಿಡಿಸಿದ್ದು ನನಗೆ ಸಂತೋಷ ತಂದಿದೆ. ಧನ್ಯವಾದಗಳು.

Leave a Reply

Back To Top