ಕಾವ್ಯ ಸಂಗಾತಿ
ದೇವಿದಾಸ ಬಿ ನಾಯಕ
ಪ್ರಾರಬ್ಧ
ಯಾವ ಜನ್ಮದ ಕರ್ಮವೋ
ಯಾವ ಜನ್ಮದ ಪಾಪವೋ
ತಡೆಯಲಾಗದ ಕಷ್ಟವೋ
ಅಳಿಸಲಾಗದ ದುಃಖವೋ/ಪ/
ಇಂದು ಕಾಣುವ ನೋವಲಿ
ಜೀವ ಇರದ ಕಾಲಲಿ
ವ್ಯಥೆ ಯಾರಿಗೆ ಹೇಳಲಿ?
ದಿನವು ಹೇಗೆ ನೂಕಲಿ?/
ನಿತ್ಯ ಸಾಯುತ ಬದುಕಲು
ಒಂದೇ ಸಮನೆ ನರಳಲು
ಕಾಣದು ಹಿಂಸೆಯ ಅಳಲು
ಬಿಡದು ವಿಧಿಯ ಕಾವಲು/ಪ/
ಹಣೆಬರಹ ತಿಳಿಯದು
ಇರಲು ಸಾವು ಬಾರದು
ತಪ್ಪಿಗೆ ಶಿಕ್ಷೆಯು ತಪ್ಪದು
ಉಸಿರು ಶಾಶ್ವತವಲ್ಲದು/ಪ/
ದೇವಿದಾಸ ಬಿ ನಾಯಕ
ಅರ್ಥಪೂರ್ಣ, ಪರಿಪೂರ್ಣತೆ
ಮನಸ್ಸಿಗೆ ನಾಟಿದ ಅರ್ಥಪೂರ್ಣ ಕವಿತೆ..
ಈರ್ವರಿಗೂ ಧನ್ಯವಾದಗಳು
ನೋವು,ಆದ್ರತೆ ಹಾಗೂ ಬದುಕಿನ ಚಿತ್ರಣದ ನೈಜ ಉದಾ.ಎಂತಹ ನೋವಿಗೂ ಪರಿಹಾರವಂತೂ ಇದ್ದೆ ಇರುತ್ತದೆ.ಇದರಿಂದ ವಿಚಲಿತನಾಗುವ ಯಾವ ಅವಶ್ಯಕತೆಯು ಇಲ್ಲ.ಧೈರ್ಯಂ ಸರ್ವತ್ರ ಸಾಧನಂ…ಎಂಬಂತೆ ಭರವಸೆಯ ಮೇಲೆ ಬದುಕು…ಕವಿತೆ ಕಣ್ಣೀರ ತಣಿಸಿತು…
ಧನ್ಯವಾದಗಳು ಮೆಡಮ್
ನೋವು,ಆದ್ರತೆ ಹಾಗೂ ಬದುಕಿನ ಚಿತ್ರಣದ ನೈಜ ಉದಾ.ಎಂತಹ ನೋವಿಗೂ ಪರಿಹಾರವಂತೂ ಇದ್ದೆ ಇರುತ್ತದೆ.ಇದರಿಂದ ವಿಚಲಿತನಾಗುವ ಯಾವ ಅವಶ್ಯಕತೆಯು ಇಲ್ಲ.ಧೈರ್ಯಂ ಸರ್ವತ್ರ ಸಾಧನಂ…ಎಂಬಂತೆ ಭರವಸೆಯ ಮೇಲೆ ಬದುಕು…ಕವಿತೆ ಕಣ್ಣೀರ ತಣಿಸಿತು..