ಅನುರಾಧಾ ರಾಜೀವ್ ಸುರತ್ಕಲ್-ಹೊಸ ಕವಿತೆ

ಉಣಿಸು ಸತ್ವಾನ್ನ ಮೊಳಕೆ ಸಿರಿಯು ಬಾಡದಂತೆ
ತಣಿಸು ಹಸಿದ ಹೊಟ್ಟೆಯ ಉರಿಯು ಕಾಡದಂತೆ

ದಣಿದ ದೇಹಕೆ ವಿಶ್ರಾಂತಿಯ ಅಗತ್ಯ ಸಹಜವಲ್ಲವೇ
ಮಣಿಸು ಮನವ ಪರರಿಗೆ ನೋವನು ನೀಡದಂತೆ

ಕುಣಿಸು ನವಿಲನು ಗರಿಯ ಬಿಚ್ಚುತ ನರ್ತನಗೈಯಲು
ಬಣ್ಣಿಸು ಒಲವ ಮಾತಲಿ ಸಂಶಯ ಮೂಡದಂತೆ

ಕಣ್ಣಲಿ ಹೃದಯದ ಆಸೆಯ ಹೇಳುವ ಬಯಕೆ
ನುಣ್ಣನೆ ಪರದೆಯ ಹಿಂದಕೆ ಸರಿಸು ನೋಡದಂತೆ

ತಣ್ಣನೆ ಗಾಳಿಗೆ ಮುರಳಿಯ ಕೊಳಲಆಲಿಸಬೇಕು
ಕಾಣದೆ ದಾರಿಯು ರಾಧೆಯು ಬೆಂದಳುಸುಡದಂತೆ


Leave a Reply

Back To Top