ಡಾ.ಡೋ.ನಾ.ವೆಂಕಟೇಶ ಕವಿತೆ-ಆ ಕ್ಷಣ ಭಂಗುರ

ನಾಳೆಯ ಉದಯಕ್ಕೇನವಸರ
ಈ ದಿನದ ಘಮ ಹಾಡುತ್ತಿರುವಾಗ!

ನಾಳೆ ಅರಳಿದ ಹೂವಿನಿಂದ
ಶೃಂಗಾರಕ್ಕೇನವಸರ
ಈ ಘಳಿಗೆಯೇ ಮೊಗ್ಗು
ಅರಳುತ್ತಿರುವಾಗ!

ನಾಳೆಯ ಆಲೋಚನೆ ಯಾಕೆ
ಈ ದಿನದ ಸಂಜೆಯ ಈ ರಾತ್ರೆ
ಸುದೀರ್ಘವಾಗಿರುವಾಗ!

ನಾಳಿನ ಒಣಹುಲ್ಲ ಮೇಲೆ
ಮಲಗುವ ಚಿಂತೆ ಯಾಕೆ
ಈ ದಿನ ಸುಪ್ಪತ್ತಿಗೆ ಇರುವಾಗ!

ಈ ದಿನ ಜೀವಿಸು
ಈ ದಿನದ ಕಾಯಕ ಮುಗಿಸು
ನಾಳೆಯ ಜೀವಸಂಕುಲನದ

ಜೀವನ ಇದೀಗಲೇ ಮುಗಿಸು

ನೆನೆಸಿಕೋ ಇಷ್ಟೆ-
ಇಂದು ಇಂದಿಗೆ
ನಾಳೆ ನಾಳೆಗೆ!!


6 thoughts on “ಡಾ.ಡೋ.ನಾ.ವೆಂಕಟೇಶ ಕವಿತೆ-ಆ ಕ್ಷಣ ಭಂಗುರ

  1. “ನಿನ್ನೆ ನನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ”
    ಪ್ರಿಯ ವೆಂಕಟೇಶ್, ನಿಮ್ಮ ‘ಆ ಕ್ಷಣ ಭಂಗುರ’ ಉತ್ತಮ ಕವನ. ಅಭಿನಂದನೆಗಳು ನಿಮಗೆ.

    1. ಮೂರ್ತಿ,ಧನ್ಯವಾದಗಳು!
      ನಿಮ್ಮ – ಸ್ನೇಹಿತರ ಚಪ್ಪಾಳೆ ಸ್ಫೂರ್ತಿಯ ಸೆಲೆ!!

  2. ಸುಂದರವಾದ ಕವಿತೆ ವೆಂಕಣ್ಣ, ಅದ್ಭುತವಾದ ಶೀರ್ಷಿಕೆಯೊಂದಿಗೆ.

    1. ಮಂಜಣ್ಣ I have taken your appreciations as granted always!
      Thank you Manjunatha Pai!!

Leave a Reply

Back To Top