ಕಾವ್ಯ ಸಂಗಾತಿ
ಅಕ್ಷತಾ ಜಗದೀಶ
ಮೂಕ ಹಕ್ಕಿ……
ಮೂಕ ಹಕ್ಕಿ ತನ್ನದೇ ದನಿಯಲ್ಲಿ
ಹಾಡುತ್ತಲಿತ್ತು, ತದೇಕ ಚಿತ್ತದಲಿ..
ಚಂಚಿಯೊಳಗಿನ ಕಾಸು
ಯಾರದೋ ಬಯಕೆಯ
ಆಸೆಗೆ ಜಾರುತ್ತಲಿತ್ತು
ತನಗರಿವಿಲ್ಲದೆ
ಮೋಡದೊಳಗೆ ರವಿ
ಮರೆಯಾದಂತೆ ….
ದಡವಿರದ ಬಂಡೆಗೆ
ಆರ್ತನಾದದಲ್ಲಿ ಅಲೆಯೊಂದು
ಬಂದು ಅಪ್ಪಳಿಸುತಲಿತ್ತು
ಕತ್ತಲ ನಾಡಲ್ಲಿ ಮಿಂಚೊಂದು
ಸಿಡಿದಂತೆ……
ಕಾಣದ ಕೈಯೊಳಗಿನ
ಕರಿಮಣಿಯ ಸರ
ಕತ್ತು ಎತ್ತಿ ನೋಡಬಿಡದೆ
ಕೊರಲೋಳಗೆ ರಾರಾಜಿಸುತ್ತಿತ್ತು
ಮರುಭೂಮಿಯಲ್ಲಿಯ ನೀರಿನಂತೆ…
ನುಡಿವ ನುಡಿಯೊಂದು
ಪದಗಳೇ ಸಿಗದೇ ತಡವಡಿಸಿ
ಮೌನರಾಗದ ಅಂತರಾಳವ
ಹುಡುಕುತಲಿತ್ತು
ಹೆಜ್ಜೆಯೊಳಗೆ ಗೆಜ್ಜೆನಾದ
ಹುದುಗೀದಂತೆ…
ನುಡಿವ ನುಡಿಯೊಂದು
ಪದಗಳೇ ಸಿಗದೇ ತಡವಡಿಸಿ
ಮೌನರಾಗದ ಅಂತಾರಾಳವ
ಹುಡುಕುತಲಿತ್ತು
ತಾಳದಲ್ಲಿ ನಾದ ಒಂದು
ಮೊಳಗಿದಂತೆ…
ಹಗಲಿನ ಚಂದಿರನಿಗೆಲ್ಲಿ
ಬೆಳಕಿನ ಆ ಒಡಲು
ನಿಶಬ್ದಗಳ ಕಾನನದಲ್ಲಿ
ಮಾತೊಂದು ಚೂರಾದಂತೆ…
ಮುಗಿಲೆತ್ತರಕ್ಕೆ ಹಾರಿದರು
ಮೂಕಹಕ್ಕಿ..
ಮನದಾಳದ ಮಾತು ಆಲಿಸಲಿಲ್ಲ
ಬಾನಲ್ಲಿ ಮೂಡಿದ
ನೂರಾರು ಚುಕ್ಕಿ……
ಅಕ್ಷತಾ ಜಗದೀಶ.
Super Mam keep going on God bless you