ಧಾರಾವಾಹಿ
ಭಾರತಿ ಸಂ ಕೋರೆ
ನಾಲ್ಕನೆ ಕಂತು
ಪ್ರೀತಿಯ ಪಯಣ
ಪ್ರೀತಿಯ ಪರಿಚಯ
ರಾಜನಿಗೆ ಕೊಟ್ಟ ಮಾತಿನಂತೆ ದೇವಕಿ ತನ್ನ ಆಫೀಸ್ ಟೈಮ್ ಗೆ ಸರಿಯಾಗಿ ಬರುತ್ತಾಳೆ. ತನ್ನ ಕೆಲಸ ಮುಗಿಸಿ ಮನೆಗೆ ಬರುತ್ತಾಳೆ. ನಂತರ ಮನೆ ಎಲ್ಲ ಕ್ಲೀನ್ ಮಾಡಿ, ತಾನು ಕೂಡ ಫ್ರೆಶ್ ಆಗಿ, ಟೀ ಮಾಡಿಕೊಂಡು ಕುಡಿಯುತ್ತ, ರಾಜನ ನೆನಪಾಗಿ,ಅಯ್ಯೋ ರಾಜನಿಗೆ ಕಾಲ್ ಮಾಡಬೇಕು ,ವೈಟ್ ಮಾಡತಾ ಇರತಾರೆ ಅಂದುಕೊಂಡು ಕಾಲ್ ಮಾಡುತ್ತಾಳೆ. ಇಲ್ಲಿ ರಾಜನು ಇವಳ ಕಾಲ್ ಗಾಗಿ ವೈಟ್ ಮಾಡುತ್ತ ಕುಳಿತ ರಾಜನು ತಕ್ಷಣ ಕಾಲ್ ತೆಗೆದು, ಯಾವಾಗ ಬಂದ್ರಿ ಅಂತ ಖುಷಿ ಖುಷಿಯಾಗಿ ನಗುತ್ತ ಯೋಗಕ್ಷೇಮ ವಿಚಾರಿಸುತ್ತಾನೆ. ಚೆನ್ನಾಗಿದ್ದೀನಿ ನೀವು ಹೇಗಿದ್ದೀರಿ ಎಂದು ದೇವಕಿಯು ಕೇಳುತ್ತಾಳೆ. ಮತ್ತೆ ದೇವಕಿ ನಗುತ್ತಾ ರಾಜನಿಗೆ ಕೇಳುತ್ತಾಳೆ ಮೊನ್ನೆ ಯಾಕೆ ಅಷ್ಟೊಂದು ಸಿಟ್ಟಾಗಿದ್ರಿ ಎಂದು ಕೇಳುತ್ತಾಳೆ. ಆಗ ರಾಜನು ನೀವು ಭೇಟಿ ಆಮೇಲೆ ಯಾಕೆ ಸಿಟ್ಟಿನಿಂದ ಮಾತಾಡಿದೆ ಅಂತ ಹೇಳುವೆ ಎನ್ನುತ್ತಾನೆ. ದೇವಕಿ ಸರಿ ಎನ್ನುತ್ತ ಫೋನ್ ಕಟ್ ಮಾಡುತ್ತಾಳೆ.
ಮತ್ತೆ ಮರುದಿನ ಎಂದಿನಂತೆ ದೇವಕಿ ದಿನನಿತ್ಯದ ಕೆಲಸ ಮುಗಿಸಿ, ಆಫೀಸ್ ಗೆ ಹೊರಡುತ್ತಾಳೆ. ಆಗ ದಾರಿಯಲ್ಲಿ ರಾಜನ ಅನಿರೀಕ್ಷಿತ ಭೇಟಿಯಾಗುತ್ತದೆ. ಒಬ್ಬರನೊಬ್ಬರು ನೋಡಿ ನಗುತ್ತಾ ಸಂಜೆ ಭೇಟಿ ಆಗೋಣ ಎಂದು ರಾಜನು ಹೇಳುತ್ತಾನೆ.ಆಯಿತು ಎಂದು ಇಬ್ಬರು ಸಂತೋಷಪಡುತ್ತಾರೆ.
ದೇವಕಿ ಆಫೀಸ್ ಬಿಟ್ಟು ಮನೆಗೆ ಹೋಗುವಾಗ ರಾಜನಿಗೆ ಫೋನ್ ಮಾಡಿ ನಿಮ್ಮ ಜೊತೆ ಮಾತನಾಡಬೇಕು. ಪಾರ್ಕ್ ಹತ್ತಿರ ನಿತ್ತಿರುವೆ ಬನ್ನಿ ಎಂದು ಹೇಳುತ್ತಾಳೆ. ಸರಿ ಎಂದು ರಾಜನು ಬರುತ್ತಾನೆ. ದೇವಕಿ ಏನು ಮಾತನಾಡದೆ ಸುಮ್ಮನೆ ಕುಳಿತುಕೊಳ್ಳುತ್ತಾಳೆ. ಆಗ ರಾಜನು ಅವಳ ಸಪ್ಪಗಾದ ಮುಖ ನೋಡಿ, ಯಾಕ್ರೀ ಮೇಡಂ ಏನಾಯಿತು? ಯಾಕ ಸಪ್ಪಾಗಿದಿರಾ ? ಎಂದು ಪ್ರಶ್ನೆ ಮಾಡುತ್ತಾನೆ. ಆಗ ದೇವಕಿ ಮೊನ್ನೆ ಊರಿಗೆ ಹೋಗಿದ್ದಾಗ ನನ್ನ ನೋಡಲು ಗಂಡಿನ ಕಡೆಯವರು ಬಂದಿದ್ದರು ಅಂತ ಹೇಳುತ್ತಾಳೆ.
ರಾಜನು ಸಿಟ್ಟಿನಿಂದ ಏನು ನೋಡಲು ಬಂದಿದ್ದರಾ??? ಎಂದು ಕೋಪಗೊಂಡು ಕೇಳುತ್ತಾನೆ. ಆಗ ದೇವಕಿ ಹೌದು ಎನ್ನುತ್ತ, ನೀವು ಯಾಕ್ ಸಿಟ್ಟಾಗತಿದಿರಾ ಎಂದಾಗ. ಮತ್ತ ಏನು ಕುಣಿಬೇಕಾ ಎಂದು ಕೇಳುತ್ತಾನೆ. ಯಾಕ್ರೀ ನಾನು ನಿಮಗೆ ಲೈಕ್ ಆಗಲಿಲ್ಲವೆ? ಎಂದು ಕೇಳಿದಾಗ,ಯಾರು ಇಲ್ಲ ಅಂದವರು ನೀವು ಇಷ್ಟ ಇಲ್ಲ ಅಂತ ಎನ್ನುತ್ತಾಳೆ. ಆಗ ರಾಜ ಮತ್ತೆ ಅದು ಹೇಗೆ ಬೇರೆ ಗಂಡಿನ ಮುಂದೆ ಹೋಗಿ ನಿಂತಿರಿ ನೀವು ಎನ್ನುತ್ತಾನೆ.
ಅವರು ಬರೋದು ನನಗೆ ಗೊತ್ತಿಲ್ಲ. ನಿಮಗೆ ಹೇಗೆ ಹೇಳೋದು ಹೇಳಿ ಎನ್ನುತ್ತಾಳೆ. ಹಾಗಾದರೆ ನಿಮಗೆ ಇಷ್ಟ ಇರಲಿಲ್ಲವೇ ಎನ್ನುತ್ತಾನೆ. ದೇವಕಿ ಇಲ್ಲಾರಿ ಎಂದಾಗ. ರಾಜನಿಗೆ ತುಂಬಾ ಖುಷಿಯಾಗುತ್ತದೆ. ಹಾಗಾದರೆ ನೀವು ನನಗೆ ಮಾತು ಕೊಡಿ ಇನ್ನ ಮುಂದೆ ಯಾವ ಗಂಡಿನ ಮುಂದೆ ನೀವು ಕೂಡ್ರುವುದಿಲ್ಲ ಎಂದು, ಅಂತ ದೇವಕಿಯ ಕಡೆಯಿಂದ ಮಾತು ತೆಗೆದುಕೊಳ್ಳುತ್ತಾನೆ.
ಅವಾಗ ರಾಜನಿಗೆ ಸಮಾಧಾನವಾಗುತ್ತದೆ. ಇಬ್ಬರು ಒಬ್ಬರನೊಬ್ಬರು ಬಿಟ್ಟಿರಲಾರದಷ್ಟು ಹತ್ತಿರವಾಗುತ್ತಾರೆ. ರಾಜನು ತನ್ನ ಟೈಮ್ ಟೇಬಲ್ ಹೇಳುತ್ತಾನೆ. ದೇವಕಿ ಕೂಡ ತನ್ನ ದಿನಚರಿಯನ್ನು ಹೇಳುತ್ತಾಳೆ. ಒಬ್ಬರಿಗೊಬ್ಬರು ತಮ್ಮ ತಮ್ಮ ಕುಟುಂಬದ ಪರಿಚಯ ಮಾಡಿಕೊಳ್ಳುತ್ತಾರೆ. ಆಗ ಇಬ್ಬರ ಜಾತಿ ಬೇರೆ ಬೇರೆ ಅಂತ ಗೊತ್ತಾಗುತ್ತದೆ.
ಇಷ್ಟೆಲ್ಲ ಆದ ಮೇಲೆ ಇವರಿಬ್ಬರದು ಪ್ರೀತಿಯ
ಪಯಣ ಶುರುವಾಗುತ್ತದೆ…
ಧಾರಾವಾಹಿಯ ಮುಂದುವರೆದ ಭಾಗ ಮುಂದಿನ ಮಂಗಳವಾರ…
ಭಾರತಿ ಸಂ ಕೋರೆ
ಭಾರತಿ ಸಂ ಕೋರೆ.
(ಲೇಖಕರು.ಸಾಹಿತಿಗಳು.
ಅಂಕಲಿ ಬೆಳಗಾವಿ ಜಿಲ್ಲೆ) ಇವರು ಪ್ರತಿಷ್ಠಿತ ಕೆ.ಎಲ್. ಇ ಸಂಸ್ಥೆಯ ಸಿ.ಎಸ್.ಕಿತ್ತೂರು ಪ್ರೌಢಶಾಲೆ ಅಥಣಿಯಲ್ಲಿ ಶಿಕ್ಷಕಿಯಾಗಿ ಒಂಬತ್ತು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಶಿಕ್ಷಣ (ಫ್ಯಾಷನ್ ಡಿಸೈನರ್) ಎಂ.ಎ.ಬಿ ಇಡಿ. ಇವರು ಶಾಲೆಯಲ್ಲಿ ಹಂಚಿಕೊಂಡ ಶಾಲಾ ವಿಭಾಗಗಳು – 04
ಸಾಹಿತ್ಯ ಕ್ಷೇತ್ರ ಮತ್ತು ಸಂಘಗಳು – 08 ಇವರ ಪ್ರಕಟಿತ ಕೃತಿ – 01(ಶಾರದಾ ಪ್ರಭೆ ಡಾ.ಪ್ರಭಾಕರ ಕೋರೆಯವರ ಕುರಿತು)
ಬಿಡುಗಡೆ ಹಂತದಲ್ಲಿರುವ ಕೃತಿಗಳು – 02
ಇವರ ಆಸಕ್ತಿ : ಕಥೆ,ಕವನ,ಕಾದಂಬರಿ ಬರೆಯುವುದು,ಓದುವುದು, ಸಂಗೀತ,ನೃತ್ಯ,ಚಿತ್ರಕಲೆ ಮುಂತಾದವು.
ಇನ್ನು ಇವರನ್ನು ಅರಸಿ ಬಂದ ಪ್ರಶಸ್ತಿಗಳು
04 ರಾಜ್ಯ ಪ್ರಶಸ್ತಿಗಳು
03 ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.
ಭಾರತಿ ಕೋರೆಯವರು ಶಿಕ್ಷಕ ವೃತ್ತಿಯ ಜೊತೆಗೆ ನುಡಿ ಮುತ್ತುಗಳು,ಹನಿಗವನ,ಅಂಕಣ ಬರಹ ಮುಂತಾದವುಗಳನ್ನು ಬರವಣಿಗೆಯ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.