ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅವ್ವನ ನೆನಪಲಿ
ಬರೆಯಲು ಹೋದರೆ
ಅಕ್ಷರದ ಬದಲು
ಕಣ್ಣೀರು ಮೂಡಿದವು

ಕಷ್ಟವೇನೇ ಇರಲಿ
ಸಹಿಸಿದಳು ಅವ್ವ
ಶುಭವನೆ ಹರಸಿ
ಪಾಲಿಸಿದಳು ಅವ್ವ

ಕತ್ತಲೊಡನೆ ಹೋರಿ
ಜಯಿಸಿದನು ರವಿ
ಬೆಳಕನೆ ಸುರಿಸಿ
ಹರಸಿದನು ಭುವಿ

ದೇಹ ಮರೆಯಾದರೂ
ಸುತ್ತೆಲ್ಲ ಆ ಬೆಳಕು
ಮಕ್ಕಳ ಬಾಳಿಗಾಕೆ
ಕಷ್ಟ ಸುಖಕೆ ದಿಕ್ಕು

ವೇದದಾಚೆಗಾಕೆಯ
ಕೀರ್ತಿಯು ಹಬ್ಬಿಹುದು
ದೇವಲೋಕದೊಳಗೂ
ಇಲ್ಲ ಇಂಥ ಮೂರ್ತಿಯು

ಅವ್ವನ‌ ನೆನಪಿಗೆ
ತನಗದ ಅರ್ಪಣೆ.
ಪ್ರತಿ ಸಾಲಿನೊಳಗೂ
ಫಲಿಸಿದೆ ಕರುಣೆ


About The Author

1 thought on “ವೈ ಎಂ.ಯಾಕೊಳ್ಳಿ-ಅವ್ವ ತನಗವಾದಳು”

Leave a Reply

You cannot copy content of this page

Scroll to Top