ಮಾಜಾನ್ ಮಸ್ಕಿ ಯವರ ಕವಿತೆ-ಜೀವೋನ್ಮಾದ

ಕಪ್ಪು ಕಲ್ಲಿನ
ಕಾಂತಿಯುತ ಶಿಲಾಬಾಲಕೇ —
ಕಪ್ಪು ಮಣ್ಣಿನ ತಂಪು ನೀ
ಅದರಲ್ಲಿ ಅರಳಿ ನಿಂತ
ಹತ್ತಿ ಹೂವು ನಗೆ ನೀ
ನಿಸರ್ಗಲೇಪಿತ
ಸೌಂದರ್ಯ ವರ್ಧಕ ನೀ
ಮನ – ಮನಸ್ಸಿಗೆ
ಮುದ ನೀಡುವ
ಮಣ್ಣಿನ ಕಂಪು ನೀ
ಆಗಸದ ನೀರೆಲ್ಲಾ
ಈ ಮಣ್ಣಿನಲ್ಲಿ
ಆ ಗಂಗೆಯ
ಲವಲವಿಕೆ ನೀ —
ಕಷ್ಟ – ನೋವಿನಲ್ಲೂ
ಸುಖದ ಪರಾಗತ ನೀ
ಆನಂದಮಯಿ ನೀ
ಏನೆಂದು ಬಣ್ಣಿಸಲಿ
ಸೌಂದರ್ಯವೇ —
ಉತ್ಸಾಹಿಯೇ —–
ನಿನ್ನ ನೋಡುವರಿಗೆಲ್ಲ
ಜೀವೋನ್ಮಾದ ನೀ
ನಿಶೆ ತರುವ
ನಷೆಯ ಮದ್ದು ನೀ
ಪರಾಮೃತ ನೀ!!


Leave a Reply

Back To Top