ರಾಹುಲ್ ಸರೋದೆಯವರ ಕವಿತೆ-“ಹ್ಯಾಂಗ ಬಿಟ್ಟೊಗಲೆವ್ವ”

ಎಲ್ಲೋ ಇದ್ದ ನಿನ್ನ
ಇಲ್ಲಿ ಕರೆತಂದು
ನೀ ಇದ್ದಂಗ ಇರು ಎಂದು
ನಿನ್ನ ಮಗನಂತೆ ಆರೈಕೆ ಮಾಡಿ
ತುತ್ತುಣುಸಿದ ನಿನ್ನ ಹ್ಯಾಂಗ ಬಿಟ್ಟೊಗಲೆವ್ವ

ನೀ ತೋರಿದ ನಿಸ್ವಾರ್ಥ ಪ್ರೀತಿ
ನಾ ಎಲ್ಲೂ ನೋಡಿಲ್ಲ
ನಿನ್ನ ಕಾಳಜಿಯ ನಿಟ್ಟುಸಿರು
ನನಗೆ ಅರ್ಥವಾಗಲಿಲ್ಲ
ಅಪ್ಪಿ ಮುದ್ದಾಡಲು ನೀ ನನ್ನೊಂದಿಗಿರಲಿಲ್ಲ
ಅದ್ಯಾಂಗ ಬಿಟ್ಟೊಗಲೆವ್ವ ನಿನ್ನಾ….

ನಿನ್ನ ಆರೋಗ್ಯ ಹದಗೆಟ್ಟಾಗ
ನನ್ನ ಕಣ್ಣಂಚಲ್ಲಿ ಮಿಂದ ಕಂಬನಿ
ನೀ ಮಗುವಂತೆ ಹೆಗಲಮೇಲೆ ಮಲಗಿದಾಗ
ನಿನ್ನ ನಿಟ್ಟುಸಿರು ನಾ ಮೌನಿಯಾಗುವಂತೆ
ಮಾಡಿತವ್ವ ಅದ್ಯಾಂಗ ಬಿಟ್ಟೊಗಲೆವ್ವ ನಿನ್ನಾ….

ಯಾರೋ ಮಾಡಿದ ತಪ್ಪಿಗೆ
ನೀ ಶರಣಾಗುವುದು ಬೇಡ
ಗುಡಿ ಗುಂಡಾರ ಮಸೀದಿ
ಚರ್ಚ್ಗಳಲ್ಲಿ ಮಲಗಬೇಡವ್ವ
ನಿನ್ನ ಮಗನಂತೆ ನಾನೀರುವೆನವ್ವ
ನಿನ್ನ ಬಿಟ್ಟು ನಾ ದೂರ ಅದ್ಯಾಂಗ ಹೋಗಲೆವ್ವ….

—————————-

One thought on “ರಾಹುಲ್ ಸರೋದೆಯವರ ಕವಿತೆ-“ಹ್ಯಾಂಗ ಬಿಟ್ಟೊಗಲೆವ್ವ”

Leave a Reply

Back To Top