ಅನಸೂಯ ಜಹಗೀರದಾರ-ಗಜಲ್

ಅವನಿಂದ ಕಟು ಸತ್ಯವನ್ನೇ ಬಯಸಿದ್ದೆ ಸಿಹಿಯಾದ ಸುಳ್ಳುಗಳನಲ್ಲ
ಸ್ವತಂತ್ರದ ಮುಳ್ಳೇ ಇರಲೆಂದೆ ಪರತಂತ್ರದ ಕಾಗದದ ಹೂವುಗಳನಲ್ಲ

ಹಾತೊರೆವ ಜೀವವೊಂದು ಉಸಿರಾಗಬೇಕಿತ್ತು ಇರುವವರೆಗೆ
ತುಡಿವ ಮಿಡಿವ ಸಂವೇದನಯ ಅರಸಿದೆ ಯಾಂತ್ರಿಕ ಭಾವಗಳನಲ್ಲ

ಒಡನಾಡಿಯಾಗಿ ಎದೆಬಡಿತದಲಿ ಮಿಲಿತವಾಗುವ ಬಯಕೆಯಿತ್ತು
ಸಹಜತೆ ಹಂಬಲಿಸಿದೆ ಅಹಮಿಕೆಯಲಿ ಎಸೆದ ಭಿಕ್ಷೆಯ ಅಗುಳುಗಳನಲ್ಲ

ವಿಕೋಪ ಕೆಡವಿದಂತೆಲ್ಲ ಕಟ್ಟುವ ಕಟ್ಟಡ ಕುಶಲ ಕರ್ಮಿ ಎಂದಿಗೂ ನಾನು
ಮುಳುಗುವಾಗ ಬದುಕಲು ಗರಿಕೆ ಹಿಡಿಯುವೆ ಕತ್ತು ಹಿಸುಕುವ ಕೈಗಳನಲ್ಲ

ಯಾರನ್ನು ದೂರಿ ಪ್ರಯೋಜನವೇನಿದೆ
ನಿರುತ್ತರದಲೇಕೆ ಶೋಧ ಅನು
ದಿನವೂ ಕನ್ನಡಿಯ ನೋಡುವೆ ಚಣದಲಿ ಬದಲಿಸುವ ಮುಖವಾಡಗಳನಲ್ಲ


2 thoughts on “ಅನಸೂಯ ಜಹಗೀರದಾರ-ಗಜಲ್

  1. ಸುಂದರ ಭಾವದ ಗಝಲ್..
    ಕಾಫಿಯ ಸಮನಾಗಿರಬೇಕೂ ಮತ್ತು ಪ್ರತಿ ಸಾಲಿನಲ್ಲಿ ಪದಗಳು ಸಮ ಇರಬೇಕು … ನನ್ನ ಅನಿಸಿಕೆ

Leave a Reply

Back To Top