ಕಾವ್ಯ ಸಂಗಾತಿ
ಭಾರತಿ ರವೀಂದ್ರ
ತನಗಗಳು
1)ರಾಧೆಯ ಒಲವನು
ಮರೆತರೆ ಮಾಧವನು
ಅಮರ ಪ್ರೇಮಕ್ಕೆಲ್ಲಿ
ಹೆಸರು ಜಗದಲ್ಲಿ
2)
ಮನದ ಮಾತುಗಳು
ಆಡವು ತುಟಿಗಳು
ಕಣ್ಣ ಭಾಷೆ ಕಲಿತ
ಹೃದಯವದು ಜಾಣ
3)
ನೆನಪುಗಳ ಬುತ್ತಿ
ಮರೆಸಿ ನೋವುಗಳ
ಹರ್ಷದ ದೀಪ ಹೊತ್ತಿ
ನಗುತ ಇರೇ ಬಾಳು
4)
ಒಲವು ತುಂಬಿರಲಿ
ಬದುಕು ಹಾಡಿನಲಿ
ನಕ್ಕು ನಲಿಯುವಾಗ
ಸಂಭ್ರಮ ಸೇರಿದಾಗ
5)
ನೋವು ನಲಿವುಗಳ
ಈ ಬಾಳ ಹಾದಿಯಲಿ
ಒಲವು ತುಂಬಿರಲು
ಬಾಳು ಬೆಳದಿಂಗಳು
ಭಾರತಿ ರವೀಂದ್ರ