ಕಾಫಿ ನಾಡಲ್ಲಿ… ಕೂರ್ಗ್ ಪಯಣ-ಅಕ್ಷತಾ ಜಗದೀಶ್.

ಭಾರತದ ಸಾಂಸ್ಕೃತಿಯ ಪರಂಪರೆಯ ಅವಿಭಾಜ್ಯ ಅಂಗವಾಗಿಯೇ ಪಾನೀಯಗಳ ಲೋಕವನ್ನೇ ಅನಾವರಣಗೋಳಿಸುತ್ತದೆ. ಕೂರ್ಗ್ ನ ಕಾಫಿ ತೋಟಗಳು, ಸುಂದರವಾದ ಗಿರಿಧಾಮದಲ್ಲಿ ಹಚ್ಚಹಸಿರಿನಿಂದ ಕಂಗೊಳಿಸುವ ನಾಡಿನಲ್ಲಿ ಮನಮೋಹಕವಾಗಿ ಕಂಗೊಳಿಸುವ ಕಾಫಿ ತೋಟಗಳು ಕಾಫಿ ಪ್ರಿಯರನ್ನು ತನ್ನತ್ತ ಕೈಬೀಸಿ ಕರೆಯುವಂತೆ ಭಾಸವಾಗುತ್ತದೆ.


ಕಾಫಿ ತೋಟದಲ್ಲಿಯ ನಡಿಗೆ ನಿಜಕ್ಕೂ ಒಂದು ಅದ್ಭುತ ಅನುಭವ. ಕಾಫಿ ಕೃಷಿಯ ಶ್ರೀಮಂತ ಇತಿಹಾಸ, ಬೆಚ್ಚಗಿನ ಆತಿತ್ಯ ದಿಂದಾಗಿ ಕೂರ್ಗ್ ಭಾರತದ ಕಾಫಿ ರಾಜಧಾನಿ ಎಂಬ ಬಿರುದನ್ನು ಪಡೆದಿದೆ. ದೇಶದ ಕಾಫಿ ರಫ್ತಿ ಗೆ ಗಣನೀಯವಾದ ಕೊಡುಗೆ ನೀಡುತ್ತದೆ. ಕಾಫಿ ತೋಟದ ನಡಿಗೆಯೊಂದಿಗೆ ಕಾಫಿಯ ಬಗೆಗಿನ ಹಲವಾರು ವಿಷಯಗಳು ಅನಾವರಣ ಗೊಳ್ಳುತ್ತದೆ. ಕಾಫಿ ತೋಟದಲ್ಲಿ ಕಾಫಿ ಕಿಟ್ಟುಕೊಳ್ಳುವಿಕೆಯನ್ನು ಸ್ವತಃ ವೀಕ್ಷಿಸಬಹುದು ಜೊತೆಗೆ ಕಾಫಿ ಉತ್ಪಾದನೆಯ ವಿವಿಧ ಹಂತಗಳ ಬಗ್ಗೆ ತಿಳಿದುಕೊಳ್ಳಬಹುದು. ಕಾಫಿಯ ವಿಧಗಳಾದ ಅರೇಬಿಕಾ, ರೋಬಸ್ಟ್ರಾ ಜೊತೆಗೆ ಕೂರ್ಗ್ ನ ವಿಶೇಷವಾದ ಕಾವೇರಿ ತಳಿಯ ಬಗ್ಗೆಯೂ ಮಾಹಿತಿ ಪಡೆಯಬಹುದು.
ಪ್ರವಾಸ ಮಾರ್ಗದರ್ಶಿ ವಿವರಿಸುವ ವಿವರದೊಂದಿಗೆ ಕಾಫಿತೋಟದ ನಡಿಗೆ, ಹೆಚ್ಚಿನ ಮಾಹಿತಿ ಸಂಗ್ರಹಿಸಲು ಸಹಾಯ ವಾಗುತ್ತದೆ. ಕನ್ನಡ, ಹಿಂದಿ, ಇಂಗ್ಲೀಷ್, ತೆಲಗು, ತಮಿಳು, ಮಲೆಯಾಳಮ್, ಕೊಡವ ಭಾಷೆ ಯಾವುದೇ ಆಗಿರಲಿ ಪ್ರವಾಸಿಗರಿಗೆ ಅರ್ಥವಾಗುವ ಭಾಷೆಯಲ್ಲಿ ಪ್ರವಾಸ ಮಾರ್ಗದರ್ಶಿ ಮಾಹಿತಿ ನೀಡಿದ್ದು ವಿಶೇಷವಾಗಿತ್ತು. ಕಾಫಿ ತೋಟದಲ್ಲಿ ಕಾಫಿ ತಳಿಗಳ ಜೊತೆಗೆ ಪ್ಲಾಂಟೇಷನ್ ನಲ್ಲಿದ್ದ ಧೂಪದ ಮರ, ಯಾಲಕ್ಕಿ ಗಿಡ, ಕಾಳುಮೆಣಸಿನ ಬಳ್ಳಿ, ವೇನಿಲ್ಲ ಬಳ್ಳಿ, ಬಾಳೆ ಗಿಡಗಳ ಕುರಿತು ನೀಡಿದ ಮಾಹಿತಿ ನಿಜಕ್ಕೂ ಶ್ಲಾಘನೀಯ.


ಕಾಫಿ ತೋಟದ ನಡಿಗೆ ಬಳಿಕ ಕಾಫಿ ಸಂಸ್ಕರಣ ಘಟಕದಲ್ಲಿ ಚೆರ್ರಿ ಗಳಿಂದ ಬೀನ್ಸ್ ಅನ್ನು ಬೆರ್ಪಡಿಸುವ ಪ್ರಕ್ರಿಯೆ, ಸ್ವಚ್ಛಗೊಳಿಸುವ ಪರಿ, ಒಣಗಿಸಿ ಹುರಿಯುವ ವಿಧಾನ ವೀಕ್ಷಿಸಬಹುದು. ಆಗಷ್ಟೇ ತಯಾರಿಸಿದ ವಿವಿಧ ಬಗೆಯ ಕಾಫಿಯ ಸವಿಯನ್ನು ಆಹ್ಲಾದಿಸಬಹುದು. ಕೂರ್ಗ್ ನಾಡಲ್ಲಿ ಮಡಿಕೇರಿಯ ಮಡಿಲಲ್ಲಿ ಕೈ ಬೀಸಿ ಕರೆವ ಕಾಫಿ ತೋಟದ ನಡಿಗೆ ಎಂದಿಗೂ ಅವಿಸ್ಮರಣೀಯ. ಕೂರ್ಗ್ ಚಾಕೋಲೇಟ್ ನಂತೆ ಸವಿಯಾದ ಈ ತಾಣ ಎಂದಿಗೂ ನೆನೆಪಿನಾಳದಲ್ಲಿ ಚಿಗುರೊಡೆಯುತ್ತಿರುವ ಉದ್ಯಾನ.


One thought on “ಕಾಫಿ ನಾಡಲ್ಲಿ… ಕೂರ್ಗ್ ಪಯಣ-ಅಕ್ಷತಾ ಜಗದೀಶ್.

Leave a Reply

Back To Top