ನಾಗರಾಜ್ ಹರಪನಹಳ್ಳಿಯವರ-ಹನಿಗಳು

ಬೆಳಕಿನ ಗರ್ಭದಲ್ಲಿ
ನಡೆದಿದ್ದೇವೆ
ದೂರ ದೂರ

ಮನಸುಗಳು
ಮಾತ್ರ ಅರಳಿವೆ
ಒಂದೇ ಗಿಡದ ಹೂಗಳ ಹಾಗೆ


ಭೂಮಿಯಲಿ ನಿದ್ದೆಹೋದ
ಬೀಜ
ಮಾತನಾಡಲು
ಕಾದಿದೆ

ಮಳೆ ಮೋಡ
ನೆಲ ಮಗಿಲು
ಸಂಭಾಷಣೆಗಿಳಿದಿವೆ
*
ಕಡಲ ಅಲೆಯಲ್ಲಿ
ನಿಶಬ್ದ ಶಬ್ದ
ದಂಡೆಯಲಿ
ಮೌನವಾಗಿದೆ

ದೂರದಿ ಹಡಗೊಂದು
ಹಾಡ ಹಾಡುತ್ತಿದೆ
ಎಂದೆಂದೂ ಮುಗಿಯದ
ಕಥೆಗೆ ಹಿನ್ನೆಲೆಯಲ್ಲಿ
**
ನಿಶಬ್ದದಲಿ ಹುಟ್ಟಿದ
ಪಿಸುಮಾತು
ಇಬ್ಬರಲಿ ಮಾತ್ರ
ಅನುರುಣಿಸುತ್ತಿದೆ

ಅಲ್ಲಿ , ಆ ದೂರದಲ್ಲಿ
ಕುಳಿತವರು
ಆಡಿಕೊಳ್ಳುತ್ತಿದ್ದಾರೆ
ಪ್ರೇಮವ ಕುರಿತು
**
ನಿರಾಕಾರ ಕತ್ತಲಲಿ
ನಿದ್ದೆಹೋಗಿದ್ದೇವೆ
ಕೋಣೆ ಮಾತ್ರ
ಬೇರೆ ಬೇರೆ

ತಣ್ಣಗೆ ದೀಪ ಉರಿಯುತ್ತಿದೆ
ಬೆಳಕಿನ ಹಾಡಿನೊಂದಿಗೆ
ಪ್ರಣಯದ ಕನಸು ಕಾಣುತ್ತಾ


Leave a Reply

Back To Top