“ಹರ್ಬಲ ಪೌಡರ ಉಪಯೋಗಿಸಿ ಸರಾಸರಿ 6 ಕೆ.ಜಿ ತೂಕ ಕಡಿಮೆ ಮಾಡಿಕೊಂಡಿದ್ದೇನೆ ವಿನಯಾ,ನೀನು ಉಪಯೋಗಿಸಿ ನೋಡು,ಊಟ ಬಿಡಬೇಕೆಂದಿಲ್ಲ,ಆದರೆ ಪ್ರಮಾಣ ಕಡಿಮೆ ಮಾಡಬೇಕು ಅಷ್ಟೇ”ಎಂದಾಗ  ಉದ್ಯೋಗಸ್ಥ ಮಹಿಳೆಯಾಗಿರುವ ವಿನಯಾ ಮನೆ ಕೆಲಸಕ್ಕೆ ಆಳುಗಳನ್ನಿಟ್ಟುಕೊಳ್ಳದೇ ತಾನೇ ನಿಭಾಯಿಸಿಕೊಂಡು ಸದಾ ಕ್ರಿಯಾಶೀಲರಾಗಿರುತ್ತಿದ್ದಳು.ಆದರೆ ಅವಳು ಮೈ ತುಂಬಾ ಕೆಲಸ ಕಣ್ತುಂಬಾ ನಿದ್ದೆ, ಹೊಟ್ಟೆ ತುಂಬಾ ಎಂಬಂತೆ ಅರಾಮಾಗಿದ್ದಳು.ಆದರೆ ತುಸು ಎತ್ತರ ಕಡಿಮೆ ಇದ್ದುದರಿಂದ ದಪ್ಪ ಅನಿಸುತ್ತಿದ್ದಳು.ಗೆಳತಿಯ ಮಾತಿಗೆ ಪ್ರತಿಯಾಗಿ ವಿನಯಾ”ನೀನೇನು ಮನೇಲಿರುತ್ತಿ, ಡಯಟ್ ಮಾಡಬಹುದು, ಅಲ್ಲದೇ ಮನೆ ತುಂಬಾ ಆಳು ಕಾಳು.  ಮಾಡಿದ ತಿಂಡಿ,ಊಟವನ್ನೇ ಕೆಲವೊಮ್ಮೆ ಗಬಗಬನೆ ತಿಂದೇಳುವ ನಮ್ಮಂತವರಿಗೆ ನಿನ್ನ ಹಾಗೆ ಸರಿಯಾದ ವೇಳೆಗೆ ಮೂರು ತರಹದ ಹರ್ಬಲ ಪೌಡರಗಳನ್ನು ಮಿಶ್ರಣ ಮಾಡಿ ಪ್ರತ್ಯೇಕ ವೇಳೆಯಲ್ಲಿ ಸೇವಿಸಲು ಅಸಾಧ್ಯ,ದಪ್ಪವಿದ್ದರೇನು ತೆಳ್ಳಗಿದ್ದರೇನು?ಒಟ್ಟಾರೆ ಆರೋಗ್ಯವಾಗಿದ್ದರಷ್ಟೇ ಸಾಕಲ್ಲವೇ?”ಎಂಬ ಮಾತಿಗೆ ಅವಳ ಗೆಳತಿ ಹುಬ್ಬೇರಿಸಿ ವಿನಯಳತ್ತ ನಿರುತ್ತರಳಾಗಿ ನೋಡಿದಳು.

ಆಧುನಿಕರಣದ ಪ್ರಭಾವದಿಂದ ಇಂದು ನಾವು ಸೇವಿಸುವ ಆಹಾರ,ಅಳವಡಿಸಿಕೊಂಡ ಜೀವನ ಶೈಲಿ ಇದರ ಪರಿಣಾಮದಿಂದ ಇಂದು ಮಹಿಳೆಯರು ತಮ್ಮ ತೂಕ ಕಡಿಮೆ ಮಾಡಿಕೊಳ್ಳಲು ಜಿಮ್ ಸೆಂಟರ,ಹರ್ಬಲ ಪೌಡರ್ ನ ಮೊರೆ ಹೋಗುವದಿದೆ.ಎಷ್ಟೋ ದಿನಗಳ ನಂತರ ನನಗೆ ಒಂದನೇ ತರಗತಿ ಕಲಿಸಿದ ಗುರುಮಾತೆಯ ದರ್ಶನ ಊರಿಗೆ ಹೋದಾಗ ಆಕಸ್ಮಿಕವಾಗಿ ನನಗಾಯಿತು.ನನ್ನ ಕಣ್ಣುಗಳನ್ನೇ ನಾನು ನಂಬದಾದೆನು.ಯಾಕೆಂದರೆ ನನಗೆ ಒಂದನೇ ತರಗತಿ ಕಲಿಸಿದ ಶಕುಂತಲಾ ಅಕ್ಕೋರ ಥೇಟ್ ಹಾಗೆಯೇ ಇದ್ದಾರೆ.ಸ್ವಲ್ಪ ತೆಳ್ಳಗಾಗಿದ್ದಾರೆ ಎನ್ನುವದನ್ನು ಬಿಟ್ಟರೇ ಅದೇ ನಗು,ಅದೇ ವಿನಯತೆ.ಆದರೂ ಮನಸ್ಸು ತಡೆಯದೇ “ಅಕ್ಕೋರೆ ಆಶೀರ್ವಾದ ಮಾಡಿ,ಎಂದು ಕಾಲಿಗೆ ನಮಿಸಿದೆ. ಅರವತ್ತಾದರೂ ಮರಳಿ ಅರಳುವ ತಮ್ಮ ಚೈತನ್ಯದ ಗುಟ್ಟೇನು?”ಎಂದಾಗ “ನೋಡೇ ತಂಗಿ, ನಮ್ಮ ಮನೆಕೆಲಸವನ್ನು ನಾವೇ ಮಾಡುವಾಗ ನಮಗೆ ಅದೇ ವ್ಯಾಯಾಮ ಆಗುತ್ತೆ.ಇದ್ದ ಹಾಗೆ ಇರ್ತೀವಿ.ಹೆಚ್ಚಂದ್ರೆ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಕಮ್ಮಿ ತಿಂತೀನಿ,ಹೆಚ್ಚು ನೀರು ಕುಡಿತೇನೆ.ತರಕಾರಿ ಹಣ್ಣುಗಳನ್ನು ಸೇವಿಸುವೆ.ಬೆಳಗಾದರೆ ನಿನಗೆ ಗೊತ್ತಲ್ಲ ಬ್ರಾಹ್ಮಿ ಮುಹೂರ್ತದೊಳಗೆ ಅಂಗಳ ಗುಡಿಸಿ ರಂಗೋಲಿ ಹಾಕಿ, ಒಂದು ಕಿ.ಮೀ ದೂರದ ಉದ್ಯಾನವನದವರೆಗೆ ನಡೆದು ಹೋಗುವೆ,ನನ್ನಂತೆ ವಿಶ್ರಾಂತ ಜೀವನ ನಡೆಸುವ ನನ್ನ ಜೊತೆಗಿರುವವರ ಜೊತೆ 30 ನಿಮಿಷ ಯೋಗ ಮಾಡಿ ಮನೆಗೆ ತೆರಳಿ ನಂತರ ಮುಂದಿನ ಕೆಲಸ “ಅಂದಾಗ ಅವರ ಕ್ರಿಯಾಶೀಲತೆಯ ದಿನಚರಿಯೇ ಅವರನ್ನು ಹೀಗೆ ಚಿರಯುವತಿಯಂತೆ ಇಟ್ಟಿದೆ ಎಂದು ಅರಿವಾಯಿತು.

“ಆರೋಗ್ಯಕರವಾದ ದೇಹದಲ್ಲಿ ಆರೋಗ್ಯಕರವಾದ  ಮನಸ್ಸು”ಎಂಬಂತೆ ನಮ್ಮ ದೇಹದಷ್ಟೇ ಮನಸು ಕೂಡ ಮುಖ್ಯ.ವಯಸ್ಸಾದಂತೆ ಮಹಿಳೆಯರಲ್ಲಿ ರಸಧೂತಗಳ(ಹಾರ್ಮೋನು)ಏರಿಳಿತದಿಂದ ದೇಹ ಮತ್ತು ಮನಸ್ಸಿನ ಮೇಲೆ ಪರಿಣಾಮಗಳಾಗುತ್ತವೆ.ಇವುಗಳನ್ನು ಅರಿತು   ನಾವು ಮುತುವರ್ಜಿ ವಹಿಸಿ ನಮ್ಮನ್ನು ನಾವು ಕಾಪಾಡಿಕೊಳ್ಳಬೇಕು.ಪ್ರತಿ ಗುರಿಯ ಸಾಧನೆಗೆ ಆರೋಗ್ಯಾಮೃತವಿರಲು ಅದು ತಂತಾನೆ  ಯಶ ಪಡೆಯುತ್ತದೆ.ಇಂದಿನ ಆಧುನಿಕ ಕೋಲದ ನಾಣ್ಣುಡಿಯಂತೆ “ಇಂದು ಉತ್ತಮ ಆರೋಗ್ಯ ಹೊಂದಿದವರೇ ಶ್ರೀಮಂತರು”ಮೊಳಕೆಬರಿಸಿದ ಕಾಳು, ಹಸಿ ತರಕಾರಿ,ಹಣ್ಣುಗಳನ್ನು ಯತೇಚ್ಜವಾಗಿ ಬಳಸಬೇಕು.ಎಳನೀರು ತರಕಾರಿಗಳ ರಸ ಕೂಡ ಆರೋಗ್ಯಕ್ಕೆ ಉತ್ತಮ. ಇಂದು ನಾವು ಪತ್ರಿಕೆಯಲ್ಲಿ ಡಯಟ್ ಮಾಡುವದರಿಂದ ಮೃತಪಟ್ಟ ಘಟನೆಗಳನ್ನು ಓದುತ್ತೇವೆ. ಪೌಷ್ಟಿಕಾಂಶವಿರುವ ಆಹಾರ ಅದರ ಪ್ರಮಾಣ ಜೊತೆಗೆ ಅರಗಿಸಿಕೊಳ್ಳುವ ಪರಿಶ್ರಮವಿರಲು ಸದೃಡ ಶರೀರ ಪಡೆಯಲು ಸಾಧ್ಯ.

ಆಧುನಿಕ ಜೀವನಶೈಲಿಯ ಈ ದಿನಗಳಲ್ಲಿ ಜಂಕ್ ಫುಡ್ ನ ಪ್ರಭಾವದಿಂದ ಎಲ್ಲರಲ್ಲೂ ಸ್ಥೂಲತೆ ಎದ್ದು ಕಾಣುತ್ತಿದೆ. ಮಕ್ಕಳ ಆಶಯದಂತೆ ರಜಾದಿನಗಳಲ್ಲಿ ಅವರಿಷ್ಟದ ವಿಶೇಷ ತಿಂಡಿ-ತಿನಿಸುಗಳನ್ನು ಮಾಡಲೇಬೇಕು ಅಥವಾ ಅವು ಲಭ್ಯವಿರುವ ಹೋಟೆಲ್ ಗಳಲ್ಲಿ ಹೋಗಬೇಕಾದ ಅನಿವಾರ್ಯತೆ ಕೂಡ ಸಹಜ.ಯಾವಾಗಾದರೊಮ್ಮೆ ಪರವಾಗಿಲ್ಲ,ಪಾರ್ಸಲ ತರುವ ಮಟ್ಟಕ್ಕೆ ಹೋಗದಿದ್ದರೆ ಸಾಕು. ಮನೆಯ ಅನ್ನಪೂರ್ಣೇಶ್ವರಿಯರು ತನ್ನ ಹಾಗೂ ಕುಟುಂಬದ ಆಸಕ್ತಿಯಂತೆ ಬಿಸಿಯಾದ ಆರೋಗ್ಯಕರವಾದ ಆಹಾರ ಭಾಗ್ಯ ನೀಡಿದಾಗ ಅದು ದೇಹಕ್ಕೆ ಸಂಜೀವಿನಿಯಾಗುತ್ತದೆ.”ಆಹಾರವೇ ಔಷಧಿಯಾಗಬೇಕೇ ವಿನಃ ಔಷಧಿ ಆಹಾರವಾಗದಂತೆ ಕ್ರಮವಹಿಸೋಣ.ಹಿತಮಿತವಾದ ಊಟ,ಹಿತಮಿತವಾದ ಮಾತು ಸುಖೀಜೀವನ ಅಡಿಪಾಯಗಳಾಗಿವೆ. “ಬೆಳಗಿನ ಉಪಹಾರ ರಾಜನಂತೆ,ಮಧ್ಯಾಹ್ನದ ಊಟ ರಾಜಕುಮಾರನಂತೆ, ರಾತ್ರಿಯ ಊಟ ರೋಗಿಯಂತೆ ಮಾಡಬೇಕು”ಎಂಬ ನಾಣ್ಣುಡಿಯಂತೆ  ನಮಗೆ ಕಾಯಿಲೆ ಬಂದಾಗ ನಾವೇ ಔಷಧಿ ತೆಗೆದುಕೊಳ್ಳಬೇಕಲ್ಲದೇ ಪರರು ತೆಗೆದುಕೊಳ್ಳಲು ಸಾಧ್ಯವೆ? ಅದರಂತೆ ಹದವರಿತು  ನಮ್ಮ ಜೀವನ ಶೈಲಿಯನ್ನು ಬದಲಾಯಿಸುತ ನಮ್ಮ ಆರೋಗ್ಯ ಸಂಪತ್ತನ್ನು ಕಾಪಾಡಿಕೊಳ್ಳೋಣ ಅಲ್ಲವೇ?


Leave a Reply

Back To Top