ಬಾಗೇಪಲ್ಲಿ ಅವರ ಗಜಲ್

ಅನಿಸುತ್ತೆ ಶತಮಾನದ ಹಿಂದೆ ನಿನ್ನೊಡನೆ ಪ್ರೇಮವಿತ್ತು
ಮುನ್ನಡೆದು ಬಂದ ಅದು ನೆನ್ನೆಗೂ ಅದೇ ಒಲವಿತ್ತು

ಅನಿಸಿತು ಎಂದಿಗೂ ಪವಿತ್ರ ಪ್ರೇಮ ಎಂಬುದು ಅಮರ
ತೂಗಿ ನೋಡಿದರೆ ಅದು ಎಲ್ಲ ಕಾಲದಲೂ ಸಮವಿತ್ತ

ನಿನ್ನ ಕಾಣುವ ಮುನ್ನ ಬದಕು ಬಹಳ ನೀರಸವಾಗಿತ್ತು
ನಿನ್ನ ಕಂಡಾಗ ಅರಿವಿಗಿಲ್ಲದ ನೆನಪುಗಳ ಹರಿವಿತ್ತು

ನನ್ನೆಲ್ಲಾ ಬಾಳಿಗೆ ನೀನೆ ಸಂಗಾತಿ ಎಂಬುದ ತಿಳಿಯಿತು
ನನ್ನೆಲ್ಲಾ ಸಾಧನೆ ಹಿಂದೆ ನಿನ್ನ ನೈತಿಕ ಬಲವಿತ್ತು

ಕೃಷ್ಣಾ! ಎಷ್ಟು ಓದಿದರೂ ಏನು ತಿಳಿದಿದ್ದರೂ ಸಹ
ಕೊನೆಗೆ ಕಾಂತದಾಸನೆಂದು ತ್ಯಾಗಯ್ಯಗೂ ಅರಿವಿತ್ತು


Leave a Reply

Back To Top