ನಳಿನಾ ದ್ವಾರಕನಾಥ್ ಕವಿತೆ- ಪರಿಶ್ರಮ

ಪರಿಶ್ರಮಕ್ಕೆ ಇನ್ನೊಂದು ಹೆಸರು ಇರುವೆ
ಶ್ರಮಪಡದೆ ಇದ್ದರೇ ನೀ ಇದ್ದಲ್ಲೇ ಇರುವೆ
ಸೋಲು ಗೆಲುವು ಇದ್ದಾಗಲೇ ಬದುಕಲ್ಲವೆ
ಅರಿತು ನಡೆದರೆ ಬಾಳು ಸಾರ್ಥಕವಲ್ಲವೇ

ಪರಿಶ್ರಮದಿಂದಲೇ ಮೇಲೆರಿದ ಬದುಕು
ಮಹತ್ವವಾದ ಸಾಧನೆಯನ್ನು ಹುಡುಕು
ಸ್ವಸ್ಥ ಜೀವನಕ್ಕದು ಆಗುವುದು ಸರಕು
ಮಹೋನ್ನತ ಘಟ್ಟಕ್ಕೇರಿದಾಗಲೇ ಬೆಳಕು

ಹನಿಹನಿ ಸೇರಲು ಹಳ್ಳಕೊಳ್ಳವಾಗುವುದು
ಚೆನ್ನಾಗಿ ಕಾಯಿಸಿದ ಕಬ್ಬಿಣ ಹದವಾಗುವುದು
ಬೆಂಕಿಯಲಿ ಬೆಂದ ಇಟ್ಟಿಗೆ ಗಟ್ಟಿಯಾಗುವುದು
ಕಷ್ಟವಿಲ್ಲದೇ ಸುಖಪಡೆವ ಕೆಲಸ ಯಾವುದು

ಪೆಟ್ಟುಗಳ ತಿಂದಷ್ಟು ಕಲ್ಲಿಗೆ ಸುಂದರ ಆಕಾರ
ಮನುಜನೂ ದುಡಿಯದಿದ್ದರೆ ಇಲ್ಲ ಆಹಾರ
ಎಲ್ಲವೂ ನಾನಾ ರೀತಿಯ ಸಂತೆ ವ್ಯಾಪಾರ
ಇರುವೆಯ ಬುದ್ಧಿ ಕಲಿತರೆ ಬಾಳು ಉದ್ಧಾರ


One thought on “ನಳಿನಾ ದ್ವಾರಕನಾಥ್ ಕವಿತೆ- ಪರಿಶ್ರಮ

Leave a Reply

Back To Top