ತನಗೆ ಮುನಿವವರಿಗೆ ತಾ ಮುನಿಯಲೇಕಯ್ಯ?
ತನಗಾದ ಆಗೇನು? ಅವರಿಗಾದ ಚೇಗೆಯೇನು?
ಮನದ ಕೋಪ ತನ್ನ ಅರಿವಿನ ಕೇಡು!
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ,
ನೆರೆಮನೆಯ ಸುಡುವುದೆ ಕೂಡಲಸಂಗಮದೇವ

    ಅಪ್ಪ ಬಸವಣ್ಣನವರು

ಭರತ ಖಂಡದ ಇತಿಹಾಸದಲ್ಲಿ 12ನೇ ಶತಮಾನವು ಅತ್ಯಂತ ರೋಚಕ ಸತ್ಯ ಸಂಶೋಧನೆಯ ಯುಗ ಎಂದು ಹೇಳಬಹುದು
ಬಸವಾದಿ ಶರಣರು ನಡೆಸಿದ ಶರಣ ಕ್ರಾಂತಿಯು ಧಾರ್ಮಿಕ ಸಾಮಾಜಿಕ ಹಾಗೂ ಸಾಹಿತ್ಯಕ ವೈಜ್ಞಾನಿಕ ಜಾಗೃತಿಯ ಕಾರ್ಯ ಅತ್ಯಂತ ಅಪೂರ್ವವಾದದ್ದು ಜಗತ್ತಿನಲ್ಲಿ ಯಾವ ತಾರತಮ್ಯ ಭೇದ ಭಾವವಿಲ್ಲದೆ ಸರ್ವರಿಗೂ ಸಮಭಾವ ಸಮಪಾಲು ಸಹಬಾಳ್ವೆ ಎಂಬ ಮಹಾದಾಶಯವನ್ನು ಇಟ್ಟುಕೊಂಡು ಸಮಾಜದಲ್ಲಿ ನವಚೇತನವನ್ನು ನೀಡಿದ ಒಂದು ಅಪೂರ್ವ ಶರಣ ಕ್ರಾಂತಿ ನಡೆಯಿತು. ಈ ಕ್ರಾಂತಿಯ ಫಲಪುಂಜವೇ ವಚನಸಾಹಿತ್ಯ.

ಈಗ ನಾವು ಅಪ್ಪ ಬಸವಣ್ಣನವರ ಮೇಲಿನ ವಚನದ ಅನುಸಂಧಾನ ಮಾಡೋಣ ಬನ್ನಿ ಬಂಧು ಭಗೀನಿಯರೇ………

ತನಗೆ ಮುನಿಯುವವರಿಗೆ ತಾ ಮುನಿಯಲೇಕಯ್ಯಾ?
ತನಗಾದ ಆಗೇನು? ಅವರಿಗಾದ ಚೇಗೆಯೇನು?

 ಶರಣರು ಈ ಸಾಲುಗಳಲ್ಲಿ ಎಂಥಹ ಅಧ್ಭುತ, ಅಧ್ಭುತವಾದ ಅರಿವಿನ ಸಂದೇಶ ತುಂಬಿದ್ದಾರೆ ಎಂದರೆ,
ಅಹಂಕಾರ, ನಾನು ಎನ್ನುವ  ಭಾವ, ಅದಕ್ಕೆ ಪ್ರತಿಯಾಗಿ ತೊರುವ ಕೋಪ ಸರ್ವವಿನಾಶಕ್ಕೆ ಕಾರಣ ಎಂಬುದನ್ನು ಇಲ್ಲಿ ಪರಿಣಾಮಕಾರಿಯಾಗಿ ಹೇಳಿದ್ದಾರೆ ಅಪ್ಪ ಬಸವಣ್ಣನವರು.

ನಿನ್ನ  ಮೇಲೆ ಯಾರಾದರೂ ಕೋಪ ಗೊಂಡರೆ ಅದಕ್ಕೆ ಪ್ರತಿಯಾಗಿ ನೀನು ಅವರ ಮೇಲೆ ಕೋಪಗೊಳ್ಳುವುದು ಸಲ್ಲದ ವಿಷಯವಾಗಿದೆ ಇದರಿಂದ ನಿನಗಾಗುವ ಲಾಭವೇನು? ಅವರಿಗಾಗುವ ಹಾನಿಯನು? ಎಂದು ಅತ್ಯಂತ ಮಾರ್ಮಿಕವಾಗಿ ಶರಣ ಸತ್ವವನ್ನು ಮೆರೆದಿದ್ದಾರೆ ಅಪ್ಪ ಬಸವಣ್ಣನವರು.

ತನುವಿನ ಕೋಪ ತನ್ನ ಹಿರಿತನದ ಕೇಡು!
ಮನದ ಕೋಪ ತನ್ನ ಅರುವಿನ ಕೇಡು!

ನಾನು ಒಲಿದಂತೆ ಹಾಡುವೆನು ಎಂಬ ಅಪ್ಪ ಬಸವಣ್ಣನವರ ಸ್ವತಂತ್ರ ವೈಚಾರಿಕ ವಿಷಯದಂತೆ
ತನುವಿನ ಕೋಪದಿಂದ ಅಂದರೆ ನಾವು ಕೋಪಗೊಳ್ಳುವುದರಿಂದ ದೈಹಿಕ ಮಾನಸಿಕ ಸಂತುಲತೆ ಕೆಡಬಹುದು ವಿನಹ ಯಾವುದೇ  ಫಲಪ್ರದ ಆಗದು,ಸಿಗದು ಶರೀರ ಕೋಪಗೊಳ್ಳುವುದರಿಂದ ಶಾರೀರಿಕ ಸಂತುಲತೆ ಕೆಟ್ಟು ತನ್ನ  ಮನೋಭಾವನೆಗಳು ಕೀಳು ಮಟ್ಟದ್ದಾಗುತ್ತವೆ.ವಿಶಾಲವಾದ ಭಾವ ನಾಶವಾಗುತ್ತವೆ. ಮನವನ್ನು ಆವರಿಸಿರುವ ಕೋಪ ನಮ್ಮ ಅರಿವನ್ನು ನಮ್ಮ ಜ್ಞಾನವನ್ನು ಮುಸುಕುಗೊಳಿಸುತ್ತದೆ ಇದರಿಂದ ವ್ಯಕ್ತಿ ಅಜ್ಞಾನಿಯಾಗಿ ವರ್ತಿಸುವಂತೆ ಮಾಡುತ್ತದೆ ಆದ್ದರಿಂದಲೇ ಇಲ್ಲಿ ಶರಣರು ಒಂದು ಸಾದೃಶ್ಯವನ್ನು ಕೊಡುತ್ತಾರೆ.

ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ, ನೆರೆಮನೆಯ ಸುಡುವುದೇ ಕೂಡಲಸಂಗಮದೇವ!

ಮನೆಯೊಳಗಿನ ಬೆಂಕಿ ಮನೆಯನ್ನು ಮೊದಲು ಸಿಗುತ್ತದೆ ಅಂದರೆ ನಮ್ಮೊಳಗಿನ ದ್ವೇಷ ಅಸೂಹಿ ಮತ್ಸರಗಳು ನಮ್ಮೊಳಗಿನ ಜ್ಞಾನವನ್ನು ಮೊದಲು ಸುಟ್ಟು ಹಾಕುತ್ತೇವೆ.
ಇನ್ನೊಬ್ಬರ ಮೇಲೆ ಕಾರುವ
ನಮ್ಮ ಕೋಪ ಅಹಂಕಾರ ನಾನೆಂಬ ಗರ್ವ ಮೊದಲು ನಮ್ಮನ್ನು ಸುಡುತ್ತದೆ.

ಒಟ್ಟಿನಲ್ಲಿ ಇಂಥ ವಚನ ಮೌಲ್ಯಗಳಿಂದ ಮನುಷ್ಯನಾದವನು ಇಂತಹ ವಿಚಾರಗಳನ್ನು ಮುನನ ಮಾಡಿಕೊಳ್ಳಬೇಕು.


ಸುಜಾತಾ ಸಿದ್ದನಗೌಡ ಪಾಟೀಲ
ಇವರು ಮೂಲತಃ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಸಂಖ ಗ್ರಾಮದವರು.ಕ್ರಷಿ ಕುಟುಂಬದ ಸುಸಂಸ್ಕೃತ ಗೌಡಕಿ ಮನೆತನದವರು.
ವಿದ್ಯಾರ್ಹತೆ – M A, L L B.ಇವರು ರಾಜಕೀಯದಲ್ಲಿ ಸಾಂಗಲಿ ಜಿಲ್ಲಾ ಪಂಚಾಯತ್ ಸಭಾಪತಿಯಾಗಿ,ಜಿಲ್ಲಾ ನಿಯೋಜನೆ ಕಮಿಟಿಯ ಸದಸ್ಯರಾಗಿ,
ಸಾಂಗಲಿ ಜಿಲ್ಲಾ ದಕ್ಷತಾ (ಪೋಲಿಸ)ಕಮಿಟಿಯ ಸದಸ್ಯರಾಗಿ,
ಸ್ತ್ರೀ ಭ್ರೂಣ ಹತ್ಯೆ ನಿರ್ಮೂಲನ ಕಮಿಟಿ ಸದಸ್ಯರಾಗಿ,ಬಾಲಕಾರ್ಮಿಕ ವಿರೋಧಿ ಕಮಿಟಿ ಸದಸ್ಯರಾಗಿ,ರೈತರ ಆತ್ಮಹತ್ಯೆ ನಿಯಂತ್ರಣ ಮಂಡಳಿ ಸದಸ್ಯರಾಗಿ,
ತಂಟಾ ಮುಕ್ತ ಗಾಂವ ಕಮಿಟಿ ಸದಸ್ಯರಾಗಿ,
ಈಗಲೂ ಹಲವಾರು ಸಂಘ ಸಂಸ್ಥೆಗಳ ಅಧ್ಯಕ್ಷರಾಗಿ, ಸಕ್ರಿಯ ಸದಸ್ಯ,ವಿಶ್ವಸ್ಥರಾಗಿ,ಈಗ ಕೆಲವು ವರ್ಷಗಳಿಂದ
ಬಸವ ತತ್ವದ ಪ್ರಸಾರ ಮಾಡುವ ಕೈಂಕರ್ಯದಲ್ಲಿ ನಿತ್ಯ ನಿಸ್ವಾರ್ಥವಾಗಿ ಶ್ರಮಿಸುತ್ತಿರುವ ಶರಣ ಜೀವಿಗಳು.

  • ಆದರ್ಶ ಸಭಾಪತಿ ಪುರಸ್ಕಾರ.
  • ಸಾವಿತ್ರಿಬಾಯಿ ಫುಲೆ ಆದರ್ಶ ಪುರಸ್ಕಾರ.
  • ಜೀಜಾಮಾತಾ ಪುರಸ್ಕಾರ.
  • ಸಾಧಕ ಮಹಿಳೆ ಪುರಸ್ಕಾರ
  • ಡಾ M M ಕಲಬುರ್ಗಿ ಫೌಂಡೇಶನ್ ವತಿಯಿಂದ ವಚನ ಸಿರಿ ಪುರಸ್ಕಾರ.
  • ಇಂತಹ ಹಲವು ಪುರಸ್ಕಾರ ಮುಡಿಗೆರಿಸಿಕೊಂಡ
    ಸುಜಾತಾ ಪಾಟೀಲ ಇವರು,
    ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ,ಸಾಧನೆಗೈಯುತ್ತಿರುವ ಇವರು
    ಆದ್ಯಾತ್ಮಿಕತೆಯ ಮಗಳಾಗಿ,ಶರಣರ ವಚನ ಮೌಲ್ಯ
    ಈ ಮಾಲಿಕೆಯಲ್ಲಿ ಶರಣರ ತಾತ್ವಿಕ, ವೈಚಾರಿಕ ವೈಜ್ಞಾನಿಕ ಸಂದೇಶಗಳನ್ನು ಬಿತ್ತುವ ಕಾರ್ಯ ಮಾಡಲು ಮುಂದಾಗಿದ್ದಾರೆ.
    ಪ್ರತಿ ವಾರ ಬರುವ ವಚನ ಮೌಲ್ಯ ಓದಿ ಹಾರೈಸೋಣ.

One thought on “

  1. ಪ್ರತೀ ವಾರವೂ ಇಂಥ ಒಂದೊಂದು ವಚನವನ್ನು ನಿರೀಕ್ಷಿಸುತ್ತ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಆಶಿಸುವೆ.

Leave a Reply

Back To Top