ಕಾವ್ಯ ಸಂಗಾತಿ
ಡಾ.ಡೋ.ನಾ.ವೆಂಕಟೇಶ
ಸಿನಿಮೀಯ ಬದುಕು
ಸಿನಿಮೀಯ ಬದುಕು ನವಿರಾಗಿ
ಕನಸು ಹೊದ್ದು ಪ್ರಿಯೇ
ಮುಸ್ಸಂಜೆಯಿಂದ ಮುಂಜಾನೆಯವರೆಗೂ ಗಣಿತ!
ಹೂ ಗಳನ್ನು ಹಣ್ಣು ಮಾಡಿದ
ಕಾವು ತಣ್ಣಗಾಗಿಸುವ ಭಂಗಿ
ಇಳಿಗಾಲದಲ್ಲಿ ಮಳೆಗಾಲದ ಬಯಕೆ
ಬಸುರಾಗುವ ಮುನ್ನ
ಗರ್ಭಪಾತ
ಭೋರ್ಗೆರೆವ ಜಲಪಾತದ
ಆರ್ಭಟಕ್ಕೆ
ನಾಮಕರಣ ಸ್ವಸ್ಥವಾಗಲೇ ಇಲ್ಲ
ಸುಂದರ ಕನಸು
ಹುಟ್ಟಲೇ ಇಲ್ಲ!
ಬಣ್ಣ ಹಚ್ಚಿದ ಬದುಕು
ಇದೀಗ ನಿರ್ಬಣ್ಣವಾಗಿ
ನಮಿಸಿ ಸಂಭ್ರಮಿಸಿ
ನಿರ್ಗಮಿಸಿತ್ತು
ಜೀವ ಜೀವನದ
ಕೊಂಡಿ ಕಳಚಿತ್ತು
ಸುಖಾಂತ್ಯ ಕಂಡಿತ್ತು!!
ಡಾ.ಡೋ.ನಾ.ವೆಂಕಟೇಶ
“ಸಿನೀಮಿಯ ಬದುಕು”
ನಮ್ಮ ಯುವ ಪೀಳಿಗೆಗೆ ಬಹಳ ಎಚ್ಚರಿಕೆಯ ಕವಿತೆ. ನೀವು ಉತ್ತಮ ಹೊಸ ವರ್ಷದ ಸಂದೇಶವನ್ನು ನೀಡಿದ್ದೀರಿ.
ಶುಭಾಷಯಗಳು
ಥ್ಯಾಂಕ್ಯೂ ಮಂಜಣ್ಣ!
ಸಿನಿಮೀಯ ಬದುಕು, ಇಂದಿನ ಜೀವನ…..
ಅಂಕದ ಪರದೆ ಜಾರಿದ ಮೇಲೆ,
ಬಣ್ಣ ಕಳಚಿದ ಮೇಲೆ,
ಎಲ್ಲೆಡೆ ನಿಶಬ್ದ…
….. ಸೂರ್ಯ ಕುಮಾರ್.