ಸತೀಶ್ ಬಿಳಿಯೂರು ಕವಿತೆ ಬದುಕು ಮತ್ತು ದ್ವೇಷ

ಅವರವರು ಕಂಡ ಜೀವನ
ಅವರವರು ಅನುಭವಿಸಿ ತೇಗಿದಂತೆ
ಬಾಳಿ ಬದುಕುವ ಪ್ರತಿದಿನ
ಅನುಭವಿಸಿ ಪಡೆದ ಸಾರದಂತೆ

ಅವರವರು ಕಂಡ ಕನಸು
ಅವರ ಕಣ್ಣಿನ ಕೂಸು
ನನಸಾಗದೆ ಹೋದರೆ ಮನಸು
ಸೆಳೆದು ಕರೆಯಿತೇ ಮುನಿಸು

ಅವರವರು ಜೊತೆಯಾಗಿ ನಕ್ಕರೆ
ಸಂಬಂಧದೊಳಗೆ ಬೆರೆತು ಬಾಳಿದರೆ
ಅವರ ಮೇಲೆಯೇ ದ್ವೇಷ ಭಾವನೆ
ಸಾಧಿಸುವೆ ಯಾಕೇ ಸುಮ್ಮನೆ

ಯಾಕೇ ಸೃಷ್ಟಿಸುವೆ ಒಳ ಕಲಹ
ನಿನಗೇಕೆ ಇದರ ಮೇಲೆ ಮೋಹ
ಅರಿಯದೆ ಮುನ್ನುಗ್ಗಿದರೆ
ಉಳಿಗಾಲವಿಲ್ಲ ತಿಳಿದುಕೋ ಮೊದಲೇ

ಬದುಕು ಯಾರು ಕಂಡ ಹಾಗಿಲ್ಲ
ತಾಳ್ಮೆ ಕಳೆದರೆ ಸುಡುವುದು ಎಲ್ಲ
ಸುಡುವ ಮುನ್ನವೇ ನೀರುಣಿಸು
ನೆಮ್ಮದಿಯ ಇದ್ದಿಲು ಬೂದಿಯಾಗದಿರಲು۔۔

Leave a Reply

Back To Top