ಪರಿಮಳ ಐವರ್ನಾಡು ಸುಳ್ಯ-ಏಕಾಂಗಿಯ ಒಂಟಿ ಪಯಣ

ಸಾಗುತಿದೆ ಏಕಾಂಗಿಯ ಒಂಟಿಪಯಣ
ಸುತ್ತಲೂ ಇರುವರು ಅನೇಕ ಬಂಧುಗಳು
ಇದ್ದರೂ ಇಲ್ಲದಂತೆ ಸತ್ತ ಹೆಣಗಳಂತೆ
ಭಾವನೆಗಳನ್ನೇ ಕೊಂದವರಂತೆ

ಸಾಗುತಿದೆ ಏಕಾಂಗಿಯ ಒಂಟಿಪಯಣ
ಸ್ಮಶಾನದಲ್ಲಿ ತನ್ನವರನ್ನು ಅರಸುತ್ತಾ
ಘೋಡಾರಣ್ಯದಲ್ಲಿ ಕತ್ತಲೆಯ ಸರಿಸುತ್ತ
ಸಂಗಾತಿಯ ಸಂಪ್ರೀತಿಯ ಹುಡುಕುತ್ತ

ಸಾಗುತಿದೆ ಏಕಾಂಗಿಯ ಒಂಟಿಪಯಣ
ಯಾಂತ್ರಿಕ ಬದುಕಿನ ಮಹಾಯಾನ
ಕಲ್ಲು ಹೃದಯವ ಕರಗಿಸಲಾರದೆ
ತನ್ನನ್ನೇ ಕರಗಿಸುತ ಸಾಗುತಿದೆ

ಸಾಗುತಿದೆ ಏಕಾಂಗಿಯ ಒಂಟಿಪಯಣ
ಒಂಟಿ ಜೀವನಕೆ ಹೊಂದಾಣಿಕೆಯಾಗುತ
ಕಾಣದ ನೆಮ್ಮದಿಯ ತಾಣವ ಹುಡುಕುತ್ತ
ದೂರಕೆ ಬಹುದೂರಕೆ ಪಯಣಿಸುತಿದೆ


Leave a Reply

Back To Top