ಕಾವ್ಯ ಸಂಗಾತಿ
ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ-
ಜ್ಞಾನ ಗಂಗೋತ್ರಿ
ನಾಯಗಾವ ಸಾತಾರದ ಸಾವಿತ್ರಿ
ಸ್ತ್ರೀ ಶಿಕ್ಷಣ ಗಂಗೋತ್ರಿ
ಅಶಿಕ್ಷಿತ ಬಾಲಿಕೆ ಲಕ್ಷ್ಮಿ ಖಂಡೋಜಿ
ದಂಪತಿಗಳ ಸುಪುತ್ರಿ
ಬಾಲ್ಯವಿವಾಹದಿ ಜ್ಯೋತಿಬಾ ಫುಲೆ
ಇವರ ಧರ್ಮ ಪತ್ನಿ//
ಅನ್ಯಾಯ ಅಸತ್ಯ ವಿರುದ್ಧ ಕಹಳೆ
ಮೊಳಗಿದ ಫುಲೆಯವರು
ಮುಗ್ಧ ಮನದನ್ನೆಗೆ ಮನೆಯಲಿ
ಶಿಕ್ಷಣ ಹೇಳಿಕೊಟ್ಟವರು
ಪುಣೆಯ ಭಿಡೆವಾಡಾದ ಮನೆಯನೆ
ಮಹಿಳಾ ಶಾಲೆ ಮಾಡಿದರು//
ಭಾರತದ ಪ್ರಥಮ ಮಹಿಳಾ ಶಿಕ್ಷಕಿ
ಪುಣ್ಯಸ್ರ್ತಿ ಸಾವಿತ್ರಿಯಾದರು
ಕರ್ಮಠರ ತ್ರಾಸಿಗೆ ಎದೆಗುಂದದೆ
ಗಂಡುಗಲಿಯಾದರು
ಮಹಿಳಾ ಅಧಿಕಾರ ಹಕ್ಕುಗಳಿಗಾಗಿ
ಸತತ ಹೋರಾಡಿದರು//
ಮೇಲ್ವರ್ಗ ಮಹಿಳೆಯರ ಕೇಶವಪನ
ಸತಿ ಸಹಗಮನ
ಬಾಲ್ಯವಿವಾಹ ವಿರೋಧಿಸಿದರು
ವಿಧವಾಪುನರ್ವಿವಾಹ
ಮಾನ್ಯತೆಗೆ ಮಹತ್ವ ಕೊಟ್ಟ ದಂಪತಿ
ಮಹಾತ್ಮರೆನಿಸಿದರು//
ಕಾವ್ಯೊಫುಲೆ ಕಾವ್ಯಸಂಗ್ರಹ ಲೇಖಕಿ
ಬರಹಗಾರ್ತಿ ಕವಯಿತ್ರಿ
ಬಾವನ್ನಕಶಿ ಸುಬೋಧ ರತ್ನಾಕರ
ಪತಿಮೇಲೆ ಬರೆದ ಸಾವಿತ್ರಿ
ಸಾಮಾಜಿಕ ಕ್ರಾಂತಿಯ ಜ್ಯೋತಿ
ಸ್ರ್ತೀ ಶಿಕ್ಷಣ ಗಂಗೋತ್ರಿ//
ಪ್ರಜ್ವಲಿಸುವ ಪ್ರಖರ ಜ್ಞಾನ ದೀಪದಿ
ಪುಣೆಯಲಿ ಬೆಳಗುತಿದೆ
ಸ್ನಾತಕೋತ್ತರ ವಿದ್ಯಾಲಯವಿಂದು
ತಲೆಯೆತ್ತಿ ಕರೆಯುತಿದೆ
ಉತ್ಕಟ ಸ್ರ್ತೀವಾದಿಸ್ವಾಭಿಮಾನದಖಣಿ ನಿನಗೆ ನಾವು ಚಿರಋಣಿ//
ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ ಪುಣೆ