ಕಾವ್ಯ ಸಂಗಾತಿ
ನಾಗರಾಜ ಜಿ. ಎನ್.ಬಾಡ
ಭಾವ ಚಿಲುಮೆ..
ಮನಸಿಗಂಟಿದ ಭಾವ
ಮನಸ್ಸಿನೊಳಗಿನ ನೋವ
ಭಾವದೊಳಗಿನ ಜೀವ
ಜೀಕುವ ನೆನಪುಗಳ ಹಾಗೆಯೇ ಎತ್ತಿಡಬಹುದೇ
ಹೂವಿನಂತ ಮನಸಿದು
ಮುಳ್ಳಿನಿಂದ ಗೀಚಬೇಡ
ಚುಚ್ಚು ಮಾತನಾಡಬೇಡ
ಬಣ್ಣದ ರೆಕ್ಕೆಗಳ ಕಟ್ಟಿ ಹಾರಿಸಿ
ಬಿಡಬೇಡ
ಕೋಮಲ ಭಾವನೆಗಳ
ಹಿಸುಕಿ ಕೊಲ್ಲಬೇಡ
ಮೊಗ್ಗರಳ್ಳಿ ಹೂವಾಗುವ
ಮೊದಲೇ ಕೀಳಬೇಡ
ಸುಂದರ ನಾಳೆಗಳ ಕನಸುಗಳು ಕನಸಾಗಿಯೇ ಉಳಿಯುವಂತೆ
ಮಾಡಬೇಡ
ಬದುಕಿನ ಸವಿ ಅನುಭವಿಸುವ
ಮೊದಲೇ ಕಹಿಯಾಗಿಸಬೇಡ
ಕಣ್ಣಂಚಲಿ ಮಿನುಗುವ ಬೆಳಕು
ಪ್ರಜ್ವಲಿಸಲಿ ಬಿಡು
ಮನಸಿನೊಳಗಿನ ಬೆರಗು
ಹೊರ ಹೊಮ್ಮಲಿ
ಜೀವ ಚಿಲುಮೆ ಚಿಮ್ಮಲಿ
ಬದುಕಿನೊಲುಮೆ ಅರಳಲಿ
ಜೀವ ಕಳೆಯು ಮರಳಲಿ
———————–
ನಾಗರಾಜ ಜಿ. ಎನ್. ಬಾಡ
ಭಾವಕ್ಕೆ ಬಣ್ಣಗಳು ಬಳಿದಾಗ ಅದು ಬದುಕಾಗುತ್ತದೆ. ಮನಸಿನ ಭಾವ, ಮಾತು ವಾಸ್ತವದ ಅಡಿಪಾಯ. ಅಲ್ಲಿ ನೆನಪುಗಳ ಚಿಲುಮೆಯಿದೆ. ಭಾವಗಳ ಒಲುಮೆಯಿದೆ. ಬದುಕಿಸುವ ಅಂತರಾಳವಿದೆ. ಪ್ರೀತಿ ಬದುಕಿನ ಚಿರಕಾಲದ ಭರವಸೆ. ಅದರ ಪೂರ್ಣತೆ ಇರುವುದು ಅನುಭವದಲ್ಲಿ ಅನುಭಾವದ ಜೊತೆಯಲ್ಲಿ. ಭಾವ ಪ್ರೀತಿಯಾಗಿ ಒಂದು ಒಳ್ಳೆಯ ಸಂಕಲ್ಪ, ಸಂವೇದನೆಯಾಗಿ ಉಳಿಯಲಿ ಎನ್ನುವ ಈ ಕವನ ಚೆನ್ನಾಗಿದೆ……
ನಾಗರಾಜ ಬಿ.ನಾಯ್ಕ
ಹುಬ್ಬಣಗೇರಿ.