ಧಾರಾವಾಹಿ
ಮೂರನೇ ಕಂತು
ಪ್ರೀತಿಯ ಪಯಣ
ಭಾರತಿ ಸಂ ಕೋರೆ
ಪ್ರೀತಿ ಪರೀಕ್ಷೆ
ಮನಸ್ಸಿನಲ್ಲಿ ಬರುವ ಆಲೋಚನೆಗಳು ದೇವರ ತೋರಿಸಿದ ಮಾರ್ಗ ಎನ್ನುವ ಹಾಗೇ..
ದೇವಕಿ ಮತ್ತು ರಾಜನ ಪರಪ್ಸರ ಪ್ರೀತಿಯ ಭಾವನೆಗಳನ್ನ ಮಾತನಾಡುವ ಮೂಲಕ ಹಂಚಿಕೊಳ್ಳಬೇಕು ಎನ್ನುವಾಗ ಇಬ್ಬರು ಕೆಲವು ದಿನಗಳು ದೂರು ಉಳಿಯಬೇಕಾದ ಪ್ರಸಂಗದಲ್ಲಿ, ಇತ್ತ ಊರಿಗೆ ಹೋದ ದೇವಕಿಗೂ ನಿರಾಸೆ, ಅತ್ತ ರಾಜನಿಗೂ ತಳಮಳ. ಏನಿದು ದೇವರು ಇಷ್ಟು ವರುಷದ ನಂತರ ಇಬ್ಬರನ್ನೂ ಪರಿಚಯಿಸಿ, ಮತ್ತೆ ಪರೀಕ್ಷೆ ಇಟ್ಟರಲ್ಲ ಎನ್ನುವ ಮಾತು. ದೇವಕಿಯ ಫೋನ್ ಕಾಲ್ ಗಾಗಿ ರಾಜನು ಕಾಯುತ್ತಿರುವಾಗ,ಆಲ್ಲಿ ದೇವಕಿ ಓಹ್ ರಾಜನಿಗೆ ಕಾಲ್ ಮಾಡುವೆ ಎಂದು ಹೇಳಿದ್ದೆ ಎಂದು ನೆನಪಿಸಿಕೊಂಡು, ಕಾಲ್ ಮಾಡುತ್ತಾಳೆ. ಇಬ್ಬರು ಮನಸಿನ ತಳಮಳದ ಬಗ್ಗೆ ಹಂಚಿಕೊಳ್ಳುತ್ತಾರೆ. ನನಗೆ ಹೀಗೆ ಯಾವತ್ತೂ ಅನಿಸಿರಲಿಲ್ಲರಿ, ಭೇಟಿಯಾಗದೇ, ನೋಡದೆ ಇರಲಾಗದು ಅಂತ ರಾಜ ಹೇಳಿದಾಗ, ದೇವಕಿ 4-5 ದಿನ ಅಷ್ಟೇ ಬರುತ್ತೇನೆ ಎಂದು ಸಮಾಧಾನದ ಮಾತು ಹೇಳುತ್ತಾಳೆ.
ಸರಿ ಆಯಿತು ಅಪ್ಪಾಜಿ ಬರುವ ಟೈಮ್ ಈಗ ನಾಳೆ ಕಾಲ್ ಮಾಡುತ್ತೇನೆ ಎಂದು ಹೇಳಿ ದೇವಕಿ ಫೋನ್ ಇಡುತ್ತಾಳೆ.
ಆಗ ರಾಜ ನೈಟ್ ನಿನ್ನ ಮೆಸೇಜ್ ಗೆ ವೈಟ್ ಮಾಡುವೆ ಎಂದು ಹೇಳುತ್ತಾನೆ ಸರಿ ಎಂದು ದೇವಕಿ ನಗುತ್ತಾ ಅಷ್ಟೊಂದು ಪ್ರೀತಿನಾ? ಅಷ್ಟು ನೆನಪಾಗುತ್ತೆನಾ? ಎಂದು ಪ್ರಶ್ನೆ ಮಾಡಿದಾಗ ಹೌದು ಎಂದು ಹೇಳಿ, ಯಾಕೆ ನಿನಗೆ ನೆನಪಾಗೋದು ಇಲ್ಲವಾ ಎಂದು ಗಂಭೀರವಾಗಿ ಕೇಳುತ್ತಾನೆ, ಆಗುತ್ತೆರಿ ಅಷ್ಟೊಂದು ಕೋಪ ಮಾಡ್ಕೋಬೇಡಿ ಎಂದು ಹೇಳಿ ಮಾತು ಮುಗಿಸಿ ಟೇಕ್ ಕೇರ್ ಎಂದು ಫೋನ್ ಇಟ್ಟು ಮನೆಗೆ ಹೋಗುತ್ತಾಳೆ.
ದೇವಕಿಯು ಊರಿಗೆ ಹೋದಾಗ ಅವಳನ್ನು ನೋಡಲು ಗಂಡಿನ ಕಡೆಯವರು ಬರುವವರಿದ್ದಾರೆ ಎನ್ನುವುದು ಆಕೆಗೆ ಗೊತ್ತೇ ಇರಲಿಲ್ಲ.
ಆ ದಿನ ರಾತ್ರಿ ದೇವಕಿಯ ತಂದೆ ಹೇಳುತ್ತಾರೆ. ನಾಳೆ ದೇವಕಿಯ ನೋಡಲು ಗಂಡಿನ ಕಡೆಯವರು ಬರುತ್ತಾರೆ, ಹುಡುಗ ಒಬ್ಬನೇ. ತುಂಬಾ ಒಳ್ಳೆಯವ. ಎಂಜಿನಿಯರ್ ಇದಾನೆ. ದೇವಕಿಗೆ ಒಳ್ಳೆ ಜೋಡಿ. ಬೇಗ ಎದ್ದು ಎಲ್ಲ ತಯಾರಿ ಮಾಡಿಕೊಳ್ಳಿ ಎಂದು ದೇವಕಿಯ ತಂದೆ ಹೇಳುತ್ತಾರೆ.
ಇದನ್ನು ಕೇಳಿದ ದೇವಕಿಗೆ ಒಂದು ಕ್ಷಣ ಏನು ಮಾಡಬೇಕೆಂಬುದು ಹೊಳಿಯಲೇ ಇಲ್ಲ.
ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು ಎನ್ನುವ ಹಾಗೆ, ಬಂದರೆ ಬರಲಿ ಬಿಡು,ನೋಡಿ ಹೋದರೆ ಏನು ಮದುವೆ ಆಗಿ ಬಿಡುವುದೇ ಎಂದು ತನ್ನ ಮನಸ್ಸನ್ನು ತಾನೇ ಸಮಾಧಾನ ಮಾಡುತ್ತಾಳೆ. ರಾತ್ರಿ ಕಳೆದು ಬೆಳಕು ಮೂಡಿತು. ದೇವಕಿಯ ಅಮ್ಮ ಇವಳನ್ನು ಎಬ್ಬಿಸುತ್ತಾರೆ. 10 ಗಂಟೆಗೆ ಗಂಡಿನ ಕಡೆಯವರು ಬರುತ್ತಾರೆ ಎದ್ದು ಬೇಗ ಬೇಗ ಸ್ನಾನ ಮುಗಿಸಿ ರೆಡಿ ಆಗು ಎನ್ನುತ್ತಾಳೆ.
ದೇವಕಿ ಒಲ್ಲದ ಮನಸ್ಸಿಂದ ಸರಿ ಅಮ್ಮ ಎನ್ನುತ್ತಾ, ಪಿಂಕ್ ಕಲರ್ ಬ್ಲಾಕ್ ಬಾರ್ಡರ್ ಸೀರೆಯುಟ್ಟು ರೆಡಿ ಆಗುತ್ತಾಳೆ.ಆ ಸೀರೆಯ ಮೇಲೆ ಒಂದು ಫೋಟೋ ತೆಗೆದು ಮುಂಜಾನೆ ಶುಭ ಸಂದೇಶದೊಂದಿಗೆ ರಾಜನಿಗೆ ಕಳಿಸುತ್ತಾಳೆ. ಇವಳ ಮೆಸೇಜ್ ಜೊತೆಗೆ ಅವಳ ಫೋಟೋ ನೋಡಿ ತುಂಬಾ ಖುಷಿ ಪಡುತ್ತಾನೆ. ವಾಹ್ ಎಸ್ಟು ಸುಂದರವಾಗಿ ಬಂದಿದೆ ಇವಳ ಫೋಟೋ ಅಂತ ಮನಸ್ಸಿನಲ್ಲಿ ಅಂದುಕೊಂಡ.
ಕಾಲ್ ಮಾಡಲೇ? ಏನು ವಿಶೇಷ ಎಸ್ಟು ಸುಂದರವಾಗಿ ರೆಡಿಯಾಗಿದಿಯಾ? ಏನು ಹೇಳು ಎನ್ನುತ್ತಾನೆ. ಹಾಗೇನು ಇಲ್ಲ ಹಾಗೆ ಸುಮ್ಮನೆ ಎನ್ನುತ್ತಾಳೆ. (ಆದರೆ ಅದು ದೇವಕಿಯನ್ನು ನೋಡಲು ಬಂದಿರುವ ಹುಡುಗನ ಕಡೆಯವರಿಗೆ ಕೊಡಲು ತೆಗೆದ ಫೋಟೋ ಅಂತ ಗೊತ್ತಿರುವುದಿಲ್ಲ ಪಾಪ ರಾಜನಿಗೆ) ಕಾಲ್ ಮಾಡುವುದು ಈಗ ಬೇಡ. ಸಂಜೆ ಮಾಡುವೆ ಎಂದು ಹೇಳುತ್ತಾಳೆ. ಅವಳ ಭಾರವಾದ ಮಾತಿನಲ್ಲಿ ಏನೋ ವಿಷಯ ಇದೆ ಅಂತ ತಿಳಿದು ಸರಿ ಮಾಡು ಎಂದು ಹೇಳುತ್ತಾನೆ. ಬೇಗ ಬಂದು ಬಿಡಿ ನೋಡದೆ ಇರುವುದು ತುಂಬಾ ಕಷ್ಟ ಎನ್ನುತ್ತಾನೆ ರಾಜ. ಆಗ ದೇವಕಿ ನನಗೇನು ನಿಮ್ಮನ್ನು ನೋಡದೆ ಇರಲು ಸಾಧ್ಯವೇ ಹೇಳಿ, ಬರುವೆ ಇನ್ನ ಎರಡು ದಿನ ಅಷ್ಟೇ ಬರುತ್ತೇನೆ ಎನ್ನುತ್ತಾಳೆ. ಅಷ್ಟರಲ್ಲಿ ಅವಳ ಅಮ್ಮ ಕರೆಯುತ್ತಾಳೆ. ಬಂದೆ ಅಮ್ಮ ಎನ್ನುತ್ತ, ಇತ್ತ ರಾಜನಿಗೆ ಬೈ ಹೇಳಿ ರೂಮಿನಿಂದ ಹೊರಗೆ ಹೋಗುತ್ತಾಳೆ.
ಆಮೇಲೆ ಗಂಡಿನ ಕಡೆಯವರು ಬಂದು ದೇವಕಿಯನ್ನು ನೋಡಿ,ಹುಡುಗಿ ಚೆನ್ನಾಗಿದ್ದಾಳೆ,ನಮಗೆ ಇಸ್ಟವಾಗಿದ್ದಾಳೆ. ಇನ್ನು ನಿಮ್ಮೆಲ್ಲರ ಅಭಿಪ್ರಾಯ ತಿಳಿಸಿ ಎಂದು ಹೇಳಿ ಹೊರಡುತ್ತಾರೆ.
ದೇವಕಿಗೋ ಎಲ್ಲಿಲ್ಲದ ಕೋಪ, ತಾಪ,ಮನದಲ್ಲಿ ಒಂಥರ ಭಯ, ಹುಡುಗ ಇಷ್ಟ ಇಲ್ಲ ಅಂತ ಹೇಳಲು ಯಾವ ಕಾರಣವೂ ಇರಲಿಲ್ಲ.ಏಕೆಂದರೆ ಎಲ್ಲದರಲ್ಲೂ ನಂಬರ ಒನ್ ಆಗಿರುವಂತಹ ಕುಟುಂಬ. ಬಹಳ ಯೋಚನೆ ಮಾಡಿ ದೇವಕಿ ತನ್ನ ತಂದೆ ತಾಯಿಗೆ ನನಗೆ ಈಗಲೇ ಮದುವೆ ಬೇಡ..ಇನ್ನೂ 2 ವರ್ಷ ಮದುವೆ ವಿಷಯ ಬಿಟ್ಟು ಬಿಡಿ. ನಾನು ಇನ್ನೂ ಕೆಲವು ಡಿಪಾರ್ಟಮೆಂಟ್ ಪರೀಕ್ಷೆಗಳನ್ನು ಬರೆಯಬೇಕು. ಎಂದು ಏನೋ ಹೇಳಿ ತಂದೆ ತಾಯಿಯನ್ನು ಒಪ್ಪಿಸುತ್ತಾಳೆ. ಅವಾಗ ಬಿಗಿ ಹಿಡಿದ ಉಸಿರನ್ನು ಬಿಡುತ್ತಾಳೆ ದೇವಕಿ. ಇದು ದೇವರು ನಮಗೆ ಇಟ್ಟ ಪ್ರೀತಿಯ ಪರೀಕ್ಷೆ ಎಂದುಕೊಳ್ಳುತ್ತಾಳೆ ದೇವಕಿ. ಇತ್ತ ರಾಜನಿಗೂ ಒಂದು ಥರ ತಳಮಳ.ದೇವಕಿ ಜೊತೆ ಮನಸ್ಸು ಬಿಚ್ಚಿ ಮಾತನಾಡಬೇಕು, ಭೇಟಿಯಾಗಬೇಕು, ನಾಳೆ ಯಾವಾಗ ಆಗುತ್ತೋ ಎಂದು ಯೋಚನೆ ಮಾಡುತ್ತಿರುವಾಗ, ಸಂಜೆ ಅವಳ ಕಾಲ್ ಬಂದಾಗ, ಮೊದಲು ನೀವು ಯಾವಾಗ ಬರ್ತೀರಾ? ಇನ್ನು ಎಸ್ಟು ದಿನ ವೈಟ್ ಮಾಡಬೇಕು ಹೇಳಿ ಎಂದು ಜೋರು ಧ್ವನಿಯಲ್ಲಿ ಮಾತನಾಡುತ್ತಾನೆ ರಾಜ.
ಆ ರೀತಿ ರಾಜನ ದ್ವನಿ ಮೊದಲ ಸಲ ಕೇಳಿದ ದೇವಕಿಗೆ ಗಾಬರಿಯಾಗುತ್ತದೆ. ಏನು ಇವರು ಇಷ್ಟು ಟೆನ್ಶನ್ ನಲ್ಲಿ ಇದರೆ?ಏನಾಗಿದೆ? ಎನ್ನುವ ಪ್ರಶ್ನೆಗಳು ದೇವಕಿಯ ಮನದಲ್ಲಿ ಬರುತ್ತವೆ. ಸರಿ ಸರಿ ಬರುತ್ತೇನೆ ನಾಳೆ ಬೆಳಿಗ್ಗೆ ಆಫೀಸ್ ಟೈಮ್ ಗೆ ಅಲ್ಲಿರುತ್ತೆನೆ ಎನ್ನುತ್ತಾಳೆ. ಓಹ್ ಹೌದಾ ಬನ್ನಿ ಬನ್ನಿ ನಿಮಗೋಸ್ಕರ ವೈಟ್ ಮಾಡುವೆ ಎಂದು ನಗುತ್ತಾ ಹೇಳಿ ಇಬ್ಬರು ಮಾತು ಮುಗಿಸುತ್ತಾರೆ
ಕಥೆಯ ಮುಂದುವರೆದ ಭಾಗ ಮುಂದಿನ ಮಂಗಳವಾರ.
ಭಾರತಿ ಸಂ ಕೋರೆ
ಭಾರತಿ ಸಂ ಕೋರೆ.
(ಲೇಖಕರು.ಸಾಹಿತಿಗಳು.
ಅಂಕಲಿ ಬೆಳಗಾವಿ ಜಿಲ್ಲೆ) ಇವರು ಪ್ರತಿಷ್ಠಿತ ಕೆ.ಎಲ್. ಇ ಸಂಸ್ಥೆಯ ಸಿ.ಎಸ್.ಕಿತ್ತೂರು ಪ್ರೌಢಶಾಲೆ ಅಥಣಿಯಲ್ಲಿ ಶಿಕ್ಷಕಿಯಾಗಿ ಒಂಬತ್ತು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಶಿಕ್ಷಣ (ಫ್ಯಾಷನ್ ಡಿಸೈನರ್) ಎಂ.ಎ.ಬಿ ಇಡಿ. ಇವರು ಶಾಲೆಯಲ್ಲಿ ಹಂಚಿಕೊಂಡ ಶಾಲಾ ವಿಭಾಗಗಳು – 04
ಸಾಹಿತ್ಯ ಕ್ಷೇತ್ರ ಮತ್ತು ಸಂಘಗಳು – 08 ಇವರ ಪ್ರಕಟಿತ ಕೃತಿ – 01(ಶಾರದಾ ಪ್ರಭೆ ಡಾ.ಪ್ರಭಾಕರ ಕೋರೆಯವರ ಕುರಿತು)
ಬಿಡುಗಡೆ ಹಂತದಲ್ಲಿರುವ ಕೃತಿಗಳು – 02
ಇವರ ಆಸಕ್ತಿ : ಕಥೆ,ಕವನ,ಕಾದಂಬರಿ ಬರೆಯುವುದು,ಓದುವುದು, ಸಂಗೀತ,ನೃತ್ಯ,ಚಿತ್ರಕಲೆ ಮುಂತಾದವು.
ಇನ್ನು ಇವರನ್ನು ಅರಸಿ ಬಂದ ಪ್ರಶಸ್ತಿಗಳು
04 ರಾಜ್ಯ ಪ್ರಶಸ್ತಿಗಳು
03 ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.
ಭಾರತಿ ಕೋರೆಯವರು ಶಿಕ್ಷಕ ವೃತ್ತಿಯ ಜೊತೆಗೆ ನುಡಿ ಮುತ್ತುಗಳು,ಹನಿಗವನ,ಅಂಕಣ ಬರಹ ಮುಂತಾದವುಗಳನ್ನು ಬರವಣಿಗೆಯ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.