ಕಾವ್ಯ ಸಂಗಾತಿ
ಮಂಡಲಗಿರಿ ಪ್ರಸನ್ನ
ತರಹೀ ಗಜಲ್
ಮಿಸ್ರಾ: ಎಲ್ಲವನೂ ಮರೆಯಲು ಸಾಧ್ಯವೇ….
ಕವಿ: ಉಮರ್ ದೇವರಮನಿ
ಎಲ್ಲವನೂ ಮರೆಯಲು ಸಾಧ್ಯವೇ ಹಳೆ ಪತ್ರಗಳನ್ನು ಸುಟ್ಟು
ಎದೆಯೊಳು ಗೂಡು ಕಟ್ಟಿರುವ ರಾಶಿ ಕನಸುಗಳನ್ನು ಸುಟ್ಟು
ಹಳೆಯದೆಲ್ಲ ಸುಲಭದಲಿ ಬಿಡಲಾಗದು ತಿರುಗಿಸಿದಂತೆ ಪುಟ
ಏಸೋ ವರುಷಗಳ ಕಾಲ ಕಾಪಿಟ್ಟ ಆ ಒಲವುಗಳನ್ನು ಸುಟ್ಟು
ಯಾವ ಕೋಗಿಲೆ ಹಾಡಿದರೇನು ಮನಸು ಅರಳದ ಮೇಲೆ
ಮಾಯಲಾಗದ ಹಸಿಹಸಿಯಾಗಿಹ ನೋವುಗಳನ್ನು ಸುಟ್ಟು
ಒಲವೆಂದರೆ ಎಲ್ಲ ಎಂದು ಅರ್ಥೈಸಿಕೊಂಡದ್ದೆ ತಪ್ಪು ಎನಿಸಿತು
ಕಣ್ಣಾಲಿಗಳಲ್ಲಿ ಜೀವವಿಟ್ಟು ಅಗಣಿತ ಇರುಳುಗಳನ್ನು ಸುಟ್ಟು
ವರುಷ ಉರುಳಿದರೇನು ಮತ್ತೆ ಬಂದರೇನು ಹೊಸ ವರ್ಷ
ಹಗಲು ರಾತ್ರಿಯೂ ಕಾಯುತಿಹ ಗಿರಿ ಭರವಸೆಗಳನ್ನು ಸುಟ್ಟ
ಮಂಡಲಗಿರಿ ಪ್ರಸನ್ನ