ರಸಋಷಿ ಕುವೆಂಪು ನೆನಪಿನಲ್ಲಿ,ರೋಹಿಣಿ ಯಾದವಾಡ ಕವಿತೆ-ತನಗಗಳು

೧) ವಿಶ್ವಮಾನವ ತತ್ವ
ಬಿತ್ತಿ ಬೆಳೆಸಿದರು
ಕನ್ನಡ ನೆಲದಲಿ
ರಾಷ್ಟ್ರಕವಿ ಕುವೆಂಪು

೨) ಕವಿಮನ ಬಿಚ್ಚಿದೆ
ಕಣ ಕಣದಲ್ಲಿಯೂ
ಕವಿಶೈಲ ಬೆಡಗು
ಮನಕದು ಮಧುರ

೩) ಕವಿಶೈಲದಿ ನಿಂದು
ನೋಡೊಮ್ಮೆ ಸೊಬಗನು
ವೈಶಿಷ್ಟ್ಯ ಇಹುದಲ್ಲಿ
ಕಣ್ಣು ಹಾಯಿಸಿದತ್ತ

೪) ಕುಪ್ಪಳ್ಳಿಯ ಪುಟ್ಟಪ್ಪ
ಕನ್ನಡಮ್ಮನ ಕುವರ
ನಾಡಿಗೆ ಕೀರ್ತಿ ಅದು
ಜ್ಞಾನಪೀಠ ಪಡೆದು

೫) ಮಹೋನ್ನತ ಸಾಧಕ
ಕಾವ್ಯಲೋಕದ ಬ್ರಹ್ಮ
ನವಪಲ್ಲವ ಹಾಡಿ
ಇತಿಹಾಸ ಬರೆದ

೬) ಸೃಷ್ಠಿಯ ಆರಾಧಕ
ಹೇಮಾಂಗಿಯ ಒಡೆಯ
ನವಯುಗದ ಕವಿ
ಕುಪ್ಪಳ್ಳಿಯ ಕುವರ

೭) ವಿಶ್ವಪ್ರಜ್ಞೆ ದರ್ಶನ
ಮಾಡಿಸಿದ ಧ್ರಷ್ಟಾರ
ಕಾಲದೇಶದ ಕವಿ
ರಸ ಋಷಿ ಕುವೆಂಪು

೮) ಸಮನ್ವಯದ ಕವಿ
ಕಾವ್ಯಕ್ಷೇತ್ರ ಬೆಳಗಿ
ಯುಗಧರ್ಮ ಸಾರಿದ
ಸಾಹಿತ್ಯ ಕೃಷಿಗೈದು

೯) ಮನುಜಮತ ಸಾರಿ
ನಡೆನುಡಿಯ ತೋರಿ
ಮೊದಲ ರಾಷ್ಟ್ರಕವಿ
ಗೌರವಕೆ ಪಾತ್ರರು

೧೦) ರಸ ಋಷಿಗೆ ಬಾಗಿ
ವಂದಿಪೆವು ನಾವೆಲ್ಲ
ಅಕ್ಷರದಿ ಬರೆದು
ನುಡಿನಮನಗೈದು


Leave a Reply

Back To Top