ರಸಋಷಿ ಕುವೆಂಪು ನೆನಪಲ್ಲಿ-
ರಸ ಋಷಿ ಕುವೆಂಪು ನೆನಪಲ್ಲಿ,
ಕವಿತೆ ರಸಋಷಿ
ರಾಜೇಶ್ವರಿ ಎಸ್. ಹೆಗಡೆ
ಈಮಲೆ ನಾಡಿನ ಹಚ್ಚಹಸಿರಿನ ಸೊಬಗಲಿ
ಕಣ್ಮನವ ಸೆಳೆಯುವ ನಿಸರ್ಗದ ಮಡಿಲಲಿ
ಈಭೂಮಿಗೆ ಇಳಿದು ಬಂದನು ಕುವೆಂಪು
ವಿಶ್ವದಿಕ್ಕಿಗೆ ಹಬ್ಬಿಸಿದನು ಗಂಧದ ಕಂಪು.
ರಸಋಷಿ ಕೈಯಿಂದ ಹರಿಯಿತು ಕನ್ನಡದ ಇಂಪು
ರಾಷ್ಟ್ರಕವಿಯ ಕೀರ್ತಿಯೇ ಕರ್ನಾಟಕಕೆ ತಂಪು
ಇವರoತರಾಳದಿ ಅಡಗಿದೆ ಜ್ಞಾನದ ನಿಧಿಯು
ಬಂದಿತು ಕರ್ನಾಟಕಕೆ ಜ್ಞಾನಪೀಠದ ಗರಿಯು.
ರೈತಬವಣೆ ಹಸಿರ ವರ್ಣನೆಯ ಸಂದೇಶ ಸಾರಿದರು
ಜಾತಿಧರ್ಮ ಸಮಾನತೆಲಿ ಬಾಳಲು ತಿಳಿಸಿದರು
ಸೂರ್ಯ ಚಂದ್ರರ ವಿಭಿನ್ನ ವರ್ಣನೆ ಬಣ್ಣಿಸಿದರು
ಮಕ್ಕಳ ಮನಮುಟ್ಟುವ ಕವನವನ್ನು ರಚಿಸಿದರು.
ಸಾಹಿತ್ಯ ಲೋಕಕಂಡ ದೈತ್ಯಪ್ರತಿಭೆ ಇವರು
ವಿಶ್ವಮಾನವ ಸಂದೇಶದ ಮುನ್ನುಡಿ ಬರೆದರು
ಯುಗದಕವಿ ಜಗದಕವಿ ಎಂದು ಖ್ಯಾತರಾದರು
ಕನ್ನಡಾoಬೆ ಕೀರ್ತಿಹೆಚ್ಚಿಸಿದ ದಿವ್ಯ ಚೇತನರಿವರು.
ರಾಜೇಶ್ವರಿ ಎಸ್. ಹೆಗಡೆ