ರಸಋಷಿ ಕುವೆಂಪು ನೆನಪಲ್ಲಿ-ಮಧುಮಾಲತಿರುದ್ರೇಶ್ ಕವಿತೆ- ಕವಿಶೈಲ

ಕವಿಶೈಲವಿದು ಬುವಿಗಿಳಿದ ಸ್ವರ್ಗವು
ಇದರಂದಕೆ ಶರಣಾಗಿದೆ ಆ ನಾಕವು

ಗಿರಿ ಗೊರವಂಕಗಳುಲಿಯುವ ತಾಣವು
ಹಸಿರಿನ ಸಿರಿಗೆ ಮುದಗೊಳ್ವುದು ಮನವು

ರಸ ಋಷಿಗೆ ಸ್ಪೂರ್ತಿಯ ಚಿಲುಮೆ
ಕಾವ್ಯಧಾರೆಗೆ ಸಾಟಿಯಿಲ್ಲದ ಒಲಮೆ

ಕಂಡಷ್ಟು ದೂರ ಹಸಿರಿನ ವನ ಸಿರಿ
ಮುಗಿಲನೇ ಬಾಚಿ ತಬ್ಬುತಿರುವ ಗಿರಿ

ಝೇಂಕರಿಸುವ ಭ್ರಮರಗಳ ಸಾಮಿಪ್ಯವು
ಕಾವ್ಯ ತಪಸ್ವಿಯ ಕಲ್ಪನೆಗೆ ಆಪ್ಯಾಯಮಾನವು

ನಿಶ್ಯಬ್ಧದಲ್ಲಿಯೂ ಕವಿ ಕಾವ್ಯದ ರಿಂಗಣ
ಮನಸೂರೆಗೊಳ್ಳುವ ಸಾಹಿತ್ಯದ ಹೂರಣ

ಕೈಬೀಸಿ ಕರೆಯುತ್ತಿದೆ ಕಾವ್ಯ ರಸಿಕರನು
ನೀಡಿದೆ ಕನ್ನಡ ದೇವಿಗೆ ಸರಸ್ವತಿ ಪುತ್ರರನು

ಬಣ್ಣಿಸಲಸದಳವು ತಾಯಿ ನಿನ್ನ ಸೊಬಗನು
ಕಾವ್ಯದಲಿ ಹಿಡಿದಿಡಲಾರೆ ನಿನಗೆ ಶರಣೆಂಬೆನು

ರಸಋಷಿಗೆ ಜನ್ಮವಿತ್ತ ತಾಯಿ ನೀ ವಿಶ್ವಮಾನ್ಯಳು
ಸಗ್ಗಸಿರಿಯನೆ ಸೂರೆಗೊಂಡ ನೀ ಜಗವಂದ್ಯಳು


One thought on “ರಸಋಷಿ ಕುವೆಂಪು ನೆನಪಲ್ಲಿ-ಮಧುಮಾಲತಿರುದ್ರೇಶ್ ಕವಿತೆ- ಕವಿಶೈಲ

  1. ತುಂಬುಧನ್ಯವಾದಗಳು ಕಾವ್ಯ ಸಂಗಾತಿ ಬ್ಲಾಗ್ ಗೆ. ಹೆಚ್ಠಿನ ಯಶಸ್ಸನ್ನು ಗಳಿಸಲೆಂದು ಆಶಿಸುತ್ತೇವೆ

Leave a Reply

Back To Top