ಶೃತಿ ರುದ್ರಾಗ್ನಿಕವಿತೆ-“ಅರಿ” ವಾದ ಮಿತ್ರ

ನಿನ್ನ ಮರೆತು
ಬಹು ದೂರ
ಸಾಗಿರುವೆ,
ಎನ್ನುವ ನನ್ನ
ನಂಬಿಕೆಗೆ
ಮತ್ತೆ ಕೊಡಲಿ
ಏಟು ಬಿದ್ದಿತ್ತು.

ರಾತ್ರಿಗಳ ಆ ಕಗ್ಗತ್ತಲ
ನಡುವೆ ಕಾಣಿಸಿದೆ.
ನೆನಪುಗಳ
ಕಪ್ಪು ಸೀಳಿ
ಕವಿ ತಾರೆಯೊಂದು
ಪಳ್ಳನೆ ಬೆಳಗಿತ್ತು.

ಆಗ ನನ್ನಲ್ಲಿ
ಉದಯಿಸಿದ ತತ್ವ
ಇರಿದ ಹೃದಯಕ್ಕೆ
ಮುಲಾಮು ಹಚ್ಚಿತ್ತು…

ತತ್ವ..
“ನೀನು ಕತ್ತಲಿನಲ್ಲಿ ಮಾತ್ರ
ಹೊಳೆಯುವ
ಅನಿಕೇತಕ್ಕೆ ನಕ್ಷತ್ರ.
ಬಾಳಿಗೆ ಬೆಳಕಾಗುವೆ
ಎನ್ನುವ ಸುಳ್ಳು
ಭರವಸೆಯ
ಹಗಲು ಕನಸಿನ
ಕಲ್ಪನೆಯ ಚಿತ್ರ.
ಮರೆಯಾಗಿ
“ಅರಿ” ವಾದ ಮಿತ್ರ.”


Leave a Reply

Back To Top