ಚಿತ್ರ ಕಲಾವಿದೆ ನಂದಿನಿ ಸಿ. ಎನ್. ವ್ಯಕ್ತಿಪರಿಚಯಗೊರೂರು ಅನಂತ

ಕಲೆಯ ತವರೂರಾದ ಹಾಸನ ಜಿಲ್ಲೆಯಲ್ಲಿ ಕಲಾವಿದರಿಗೆ ಏನು ಕಡಿಮೆ ಇಲ್ಲ. ಎಷ್ಟೋ ಕಲಾವಿದರು ಎಲೆ ಮರೆ ಕಾಯಿಯಾಗಿ ಚಿತ್ರ ಕಲೆಗಾಗಿಯೇ ಜೀವಿಸುತ್ತಿರುವ ಕಲಾವಿದರಿದ್ದಾರೆ. ಅವರಲ್ಲಿ ನಂದಿನಿ ಸಿ. ಎನ್. ಕೂಡ ಒಬ್ಬರು. ಎಲೆ ಮರೆಯ ಕಾಯಿಯಂತೆ ಚಿತ್ರಕಲೆಯನ್ನು ಆರಾಧಿಸುತ್ತಾ ಇರುವವರು. ಇವರ ಹುಟ್ಟೂರಾದ ಚನ್ನರಾಯಪಟ್ಟಣದಲ್ಲಿ ಶ್ರೀಮತಿ ಪಾರ್ವತಮ್ಮ ಮತ್ತು ಶ್ರೀ ಸತ್ಯನಾರಾಯಣಗೌಡ ಅವರ ಪುತ್ರಿಯಾಗಿ ಜನಿಸಿದ ಇವರು 1 ರಿಂದ 4 ನೇ ತರಗತಿವರೆಗೆ

ನವೋದಯ ಶಾಲೆಯಲ್ಲಿ ವ್ಯಾಸಂಗ ಮುಗಿಸಿ ಪ್ರೌಢಶಾಲೆಗೆ ಗೌತಮ ಸ್ಕೂಲ್ ಆಯ್ಕೆ ಮಾಡಿಕೊಂಡರು. ಇವರಿಗೆ ಬಾಲ್ಯದಿಂದಲೂ ಚಿತ್ರಕಲೆಯ ಬಗ್ಗೆ ಆಸಕ್ತಿ ಇದ್ದ ಕಾರಣ ಗೌತಮ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಜಿ ಎಸ್ ಎಸ್. ಎಂದು ಹೆಸರಾಗಿದ್ದ ಶಿವಶಂಕರಪ್ಪ ಸರ್ ನನಗೆ ಚಿತ್ರಕಲಾ ಶಿಕ್ಷಕರಾಗಿ ಸಿಕ್ಕಿದ್ದು ನನ್ನ ಅದೃಷ್ಟವೇ ಸೈ. ಶಿವಶಂಕ್ರಪ್ಪ ಸರ್ ಮಾರ್ಗದರ್ಶನದಲ್ಲಿ ಅತಿ ಹೆಚ್ಚು ಚಿತ್ರಕಲೆಯ ಬಗ್ಗೆ ಆಸಕ್ತಿ ಮೂಡಿ ಅವರ ಮಾರ್ಗದರ್ಶನದಂತೆ ಪ್ರೌಢಶಾಲೆ ಮುಗಿದ ನಂತರ ಹಾಸನದ ಶಾಂತಲಾ ಚಿತ್ರಕಲಾ ಕಾಲೇಜಿಗೆ ಚಿತ್ರಕಲಾ ಶಿಕ್ಷಕರ ತರಬೇತಿ ಪಡೆಯಲು ಸೇರಿಕೊಂಡೆ ಎನ್ನುತ್ತಾರೆ.

ಐದು ವರ್ಷ ಚಿತ್ರಕಲಾ ಶಿಕ್ಷಣವನ್ನು ಪಡೆದ ನಂತರ ಹಾಸನದಲ್ಲಿ ಪ್ರತಿಷ್ಠಿತ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಾ ಬಿಡುವಿನ ಸಮಯದಲ್ಲಿ ಮಕ್ಕಳಿಗೆ ಚಿತ್ರಕಲೆಯನ್ನು ಹೇಳಿಕೊಡುವ ಮೂಲಕ ಕಲೆಯನ್ನು ಬೆಳೆಸುತ್ತಾ ಬಂದರು. ಹಾಸನದಲ್ಲಿ 2020-21 ಸಾಲಿನಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಪ್ರಥಮ ಬಾರಿಗೆ ಮಹಿಳೆಯರೇ ಪೇಂಟಿಂಗ್ ಶೋ ಮಾಡಲು ಸುವರ್ಣ ಕೆ.ಟಿ. ಎಸ್. ಮಾರ್ಗದರ್ಶನದಲ್ಲಿ ಪೇಂಟಿಂಗ್ ಶೋ ಯಶಸ್ವಿಯಾಗಿ ನಡೆಯಿತು. ನಂದಿನಿ ಅವರು ಮುಂದಿನ ವಿದ್ಯಾಭ್ಯಾಸಕ್ಕೆ ತರಬೇತಿ ಪಡೆಯಲು MVA ತರಬೇತಿ ಪಡೆಯಲು ಹೆಸರಂತ ಭಾವಚಿತ್ರ ಕಲಾವಿದರಾದ ಬಾಬುರಾವ್ ನಡೋಣಿ ಅವರ ಮಾರ್ಗದರ್ಶನದಲ್ಲಿ ಬೀದರ್ ಯೋಗೇಶ್ ಚಿತ್ರಕಲಾ ಶಾಲೆಗೆ ಸೇರಿದರು. ಮೂರು ವರ್ಷ MVA ಶಿಕ್ಷಣ ಪಡೆದ ನಂತರ ಬೆಂಗಳೂರಿನಲ್ಲಿ ನಂದು ಕ್ರಿಯೇಟಿವ್ ಆರ್ಟ್ ವರ್ಕ್ ಗ್ಯಾಲರಿ ತೆರೆದಿದ್ದಾರೆ. ಆ ಗ್ಯಾಲರಿಯಲ್ಲಿ ನೂರಾರು ಮಕ್ಕಳಿಗೆ ಕಲೆಯ ಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.



Leave a Reply

Back To Top