ಡಾ.ಡೋ ನಾ.ವೆಂಕಟೇಶ ಕವಿತೆ-ಉತ್ತುಂಗ

ಅರ್ಧ ಶತಕಕ್ಕೂ ಹಿಂದಿನ
ಪರಿಚಯ  ಸ್ನೇಹ  ಪ್ರೀತಿ. ಒಲುಮೆಯ ಕಾವ್ಯ
ಕಥೆಯಾಗಲಿಲ್ಲ!

ಹಸಿ ಹಸಿರು ಉಸಿರಾಗೇ ಉಳಿದು  ಉತ್ತು ಬಿತ್ತಿದ ಬೀಜ
ಜೀವನ ಪರಾಕಾಷ್ಠೆಯಲ್ಲಿ ಸಂಭ್ರಮ, ಸಂತೋಷ
ಬೀಸಿ ಬಾಚಿಕೋ ತಂಗಾಳಿ!

ಚಾಚಿಕೋ
ಗೆಳೆಯರ ಪ್ರೀತಿ ವಿಶ್ವಾಸದ ಸೆಲೆ
ಒಡ್ಡೋಲಗ  ನಡೆಸಿಕೋ!

ಗೆಳೆಯರ ಗುಂಪು ಹುಟ್ಟಿ
ಪ್ರಿಯರ ಹರಟೆ ತಲೆಹರಟೆ
ಅಪ್ಪಿಕೋ
ವಿಶ್ವಾಸದ ನಡೆ ಮುಗಿಲ ಮುಟ್ಟಿ
ಎಗ್ಗಿಲ್ಲದೆ  ಮಾತಾಡುವ ಭಿಡೆ
ಸೆಡವಿಲ್ಲದ ಆದರದ ಕಡೆ!!

ಎಂ ಎಂ ಸಿ ಯ ಸ್ಮರಣಿಕೆಗಳು
ತಲೆಚಪ್ಪಡಿಯಲ್ಲಿಯ ಹೂರಣಗಳು-
ಸೀಕರಣೆಗಳು

ಗೆಳೆಯ ಇರುವಲ್ಲೆ ನೀ ಅನುಭವಿಸು
ಈ ಪ್ರೀತಿ ಈ ವಿಶ್ವಾಸ ಇಲ್ಲಿಂದ
ಹೋಗೇ ಬಿಡುವ ತನಕ!

ಹೋಗದೇ ಇದ್ದೂ
ಮರೆವಿನ  ರೋಗ ಮುಗಿ ಬೀಳುವ ತನಕ!!

ಅರ್ಧ ಶತಕಕ್ಕೂ ಹಿಂದಿನ
ಪರಿಚಯ  ಸ್ನೇಹ  ಪ್ರೀತಿ. ಒಲುಮೆಯ ಕಾವ್ಯ
ಕಥೆಯಾಗಲಿಲ್ಲ!

ಹಸಿ ಹಸಿರು ಉಸಿರಾಗೇ ಉಳಿದು  ಉತ್ತು ಬಿತ್ತಿದ ಬೀಜ
ಜೀವನ ಪರಾಕಾಷ್ಠೆಯಲ್ಲಿ ಸಂಭ್ರಮ, ಸಂತೋಷ
ಬೀಸಿ ಬಾಚಿಕೋ ತಂಗಾಳಿ!

ಚಾಚಿಕೋ
ಗೆಳೆಯರ ಪ್ರೀತಿ ವಿಶ್ವಾಸದ ಸೆಲೆ
ಒಡ್ಡೋಲಗ  ನಡೆಸಿಕೋ!

ಗೆಳೆಯರ ಗುಂಪು ಹುಟ್ಟಿ
ಪ್ರಿಯರ ಹರಟೆ ತಲೆಹರಟೆ
ಅಪ್ಪಿಕೋ
ವಿಶ್ವಾಸದ ನಡೆ ಮುಗಿಲ ಮುಟ್ಟಿ
ಎಗ್ಗಿಲ್ಲದೆ  ಮಾತಾಡುವ ಭಿಡೆ
ಸೆಡವಿಲ್ಲದ ಆದರದ ಕಡೆ!!

ಎಂ ಎಂ ಸಿ ಯ ಸ್ಮರಣಿಕೆಗಳು
ತಲೆಚಪ್ಪಡಿಯಲ್ಲಿಯ ಹೂರಣಗಳು-
ಸೀಕರಣೆಗಳು

ಗೆಳೆಯ ಇರುವಲ್ಲೆ ನೀ ಅನುಭವಿಸು
ಈ ಪ್ರೀತಿ ಈ ವಿಶ್ವಾಸ ಇಲ್ಲಿಂದ
ಹೋಗೇ ಬಿಡುವ ತನಕ!

ಹೋಗದೇ ಇದ್ದೂ
ಮರೆವಿನ  ರೋಗ ಮುಗಿ ಬೀಳುವ ತನಕ!!


6 thoughts on “ಡಾ.ಡೋ ನಾ.ವೆಂಕಟೇಶ ಕವಿತೆ-ಉತ್ತುಂಗ

  1. As usual ಅಣ್ಣಾ ಸೂಪರ್. …….
    ಮರೆವು ಅಳಿಸುವ ಮುನ್ನ,
    ನೆನಪಿಸಿ ಕೊಳ್ಳೋಣ ..
    ಆ ದಿನಗಳ ಸಂಭ್ರಮವ,
    ದೂರವಿದ್ದರೂ ಇರಲಿ,
    ಆ ಪ್ರೀತಿ ಸ್ನೇಹ..
    ಮುಪ್ಪಲ್ಲಿ ಅದು ಎರೆಯಲಿ ಪನ್ನೀರು..
    ಇರುವಷ್ಟು ದಿನ, ಇರುವ ಹೀಗೇ,
    ಸಿಕ್ಕಷ್ಟು ಸ್ನೇಹ,ಆತ್ಮೀಯತೆಯ ಸಾಂತ್ವನ..
    — ಕೆ. ಬಿ. ಸೂರ್ಯ ಕುಮಾರ್.

    1. ಧನ್ಯವಾದಗಳು ಸೂರ್ಯ!
      ಗೆಳೆತನದ ಸೆಳೆತ ದೇಹ ಜೀರ್ಣವಾಗುವ ಮುನ್ನ ಪ್ರಬಲ
      ದೀಪವಾರುವ ಮುನ್ನಿನ ಪ್ರಜ್ವಲಿಸುವ ಪ್ರಖರತೆ ಇರಬಹುದೇ !
      Thanq Surya

Leave a Reply

Back To Top