ಮನ್ಸೂರ್ ಮುಲ್ಕಿ ಕವಿತೆ-ಲೇಖನಿ

ಲೇಖನಿ ಮಾರುವ ಬೆಡಗಿಯೇ
ಒಂದಿನಿತು ನಗುವನು ಬೀರುವೆಯಾ
ನಿನಗಂದವ ಕೊಟ್ಟಿಹ ಪರಮಾತ್ಮ
ನಿನ್ನ ಚಂದವನೊಮ್ಮೆ ನೋಡಿದಿಯಾ||2||

ಬಿಸಿಲ ಬೇಗೆಯ ಹೂ ತೋಟ
ಕಣ್ಣ ಮಿಂಚಿನ ಆ ನೋಟ
ಸಂಚಾರದೊಳಗಿನ ಒಡನಾಟ
ನಿನ್ನ ಲೇಖನಿಯ ಮಾರಾಟ||2||

ಬಾನಂಗಳ ನೋಡುತಿಹ ಚಂದಿರನು
ತೇಲುವ ದೋಣಿಯ ನೋಡಿಹನು
ವಸಂತ ಕಾಲದ ಚಿಗುರೆಲೆಯು
ಕೋಗಿಲೆ ಗಮನಕೆ ಬಂದಿಹುದು||2||

ನಿನ್ನ ನಡತೆಯು ಸೌಮ್ಯ ಸುಂದರ
ಬಾಳ ಬಂಡಿಗೆ ನೀನೇ ಅಂತರ
ದರ್ಪಣದಲ್ಲಿಯೇ  ನೋಡಿಹೆನು
ಒಮ್ಮೆ ಬಂದು ನಿಲ್ಲುವೆಯಾ||2||

ನೀನೇ ನೀಡಿಹ ಲೇಖನಿಯಲ್ಲಿಯೇ
ಮೂಡಿಹ ಕವಿತೆಯಿದು
ನಾ ಹಾಡಿದರೆ ನೀ ಕೇಳುವಿಯಾ
ನಾ ಹಾಡಿದರೆ ನೀ ಕೇಳುವಿಯಾ|||2||


Leave a Reply

Back To Top