ಡಾ ಶಶಿಕಾಂತ ಪಟ್ಟಣ ರಾಮದುರ್ಗ-ನಾನು ಸಾಯುವುದಿಲ್ಲ

ನಾನು ಸಾಯುವುದಿಲ್ಲ
ಬದುಕುತ್ತೇನೆ
ಸೂರ್ಯ ಚಂದ್ರರ ಜೊತೆಗೆ
ಮಿನುಗುವ ಚುಕ್ಕಿ
ಸುಳಿವ ಗಾಳಿ
ಹರಿವ ನೀರು
ರೆಕ್ಕೆ ಬಿಚ್ಚಿ ಆಗಸಕ್ಕೆ
ಹಾರುವ ಹಕ್ಕಿಗಳ
ಅಮಿತ ಆನಂದದ ಅಲೆಗಳಲ್ಲಿ
ತೇಲುತ್ತಲಿರುವೆ


ನಡೆವ ನೆಲದ ಕೆಳಗೆ
ಕಲ್ಲು ಮುಳ್ಳು
ನಿಗಿ ನಿಗಿ ಕೆಂಡ
ಎಂದೂ ಅಳುಕುವದಿಲ್ಲ
ನನ್ನ ಬದುಕು ನನ್ನ ದಾರಿ
ಬದುಕುತ್ತೇನೆ ನಾನು
ನೆರೂದ ಪುಷ್ಕಿನ್ ರ ಬಂಡೆದ್ದ
ಭಾವಗಳ ಜೊತೆಗೆ
ಅಂಟಿಸಿ ಹೋಗುವದಿಲ್ಲ
ಜಗದ ಎದೆಗೆ ಅರ್ಥವಿರದ
ಕವನ ಕಾವ್ಯ
ಕೆತ್ತುವದಿಲ್ಲ ಕಲ್ಲಿನಲ್ಲಿ
ಸ್ವಾಭಿಮಾನದ ಶಾಸನ
ಬಿತ್ತಿ ಹೋಗುವೆ
ನಿಮ್ಮ ಎದೆಯಲ್ಲಿ
ಭರವಸೆಯ ಕ್ರಾಂತಿ ಬೀಜ
ಮೊಳಕೆಯೊಡೆದು
ಚಿಗುರಿ ಮರವಾಗಬಹುದು
ಹಣ್ಣು ಹೂವು ಕಾಯಿ
ಪಕ್ಷಿ ಪ್ರಾಣಿಗಳ ಜೊತೆಗೆ
ಬದುಕುತ್ತೇನೆ
ನಾನು ಸಾಯುವುದಿಲ್ಲ
ಉಳಿದವರಂತೆ
ಸತ್ತರೂ ಸಮಾಧಿಯಲ್ಲಿ
ನಾನು ಕವನ ಬರೆಯುತ್ತೇನೆ
ನೀವು ನನ್ನ ಕವನ
ಓದಿ ನಕ್ಕರೆ ಸಾಕು
ನಿಮ್ಮ ನಗೆಯಲ್ಲಿ ನಕ್ಕು ಬದುಕುತ್ತೇನೆ
ಸಮತೆಯ ದೀಪ ಹಚ್ಚಿ


8 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ-ನಾನು ಸಾಯುವುದಿಲ್ಲ

  1. ಅರ್ಥ ಪೂರ್ಣ ಕವನ ಚೆನ್ನಾಗಿದೆ ಸರ್

  2. ವಾವ್ ಅತ್ಯಂತ ಕ್ರಾಂತಿಕಾರಕ ಕವನ ಸರ್

  3. ಬಿತ್ತಿ ಹೋಗುವೆ
    ನಿಮ್ಮ ಎದೆಯಲ್ಲಿ
    ಭರವಸೆಯ ಕ್ರಾಂತಿ ಬೀಜ
    ಎಷ್ಟು ಉದಾತ್ತವಾದ ಪರಿಕಲ್ಪನೆ

    ಕೆತ್ತುವುದಿಲ್ಲ ಕಲ್ಲಿನಲಿ
    ಸ್ವಾಭಿಮಾನದ ಶಾಸನ
    ಎಷ್ಟು ಹೆಮ್ಮೆ ಮೂಡುವ ಸಾಲುಗಳು

    ನಿಮ್ಮ ನಗೆಯಲ್ಲಿ ನಕ್ಕು ಬದುಕುತ್ತೇನೆ…
    ಸುಂದರವಾದ ಮನೋಭಾವನೆ

    ಸುಶಿ

  4. ನಿಜವಾದ ಕವಿಯ ಬದುಕು ಬಾಳ್ವೆ.ಭಾವ ಸಮ್ಮೀಲನ ಜೊತೆಗೆ ಮತ್ತು ಯಾರ ಹಂಗಿಲ್ಲದ ನಿಸರ್ಗದ ಸ್ವತಂತ್ರ. ಸ್ವಚ್ದಂದ ಬಂಧ ಲಹರಿಯನಾದ ನಿನಾದ ಪಕ್ಷಿ ಕಾಶಿಯಲ್ಲಿ.. ತುಡಿತವಿದೆ..
    ಡಾ.ಕಸ್ತೂರಿ ದಳವಾಯಿ.

Leave a Reply

Back To Top