ವಿದ್ಯಾಶ್ರೀ ಅಡೂರ್ ಕವಿತೆ-ದಾರಿಯೊಂದರ ಧರ್ಮ.. ಕರ್ಮ

ದಾರಿಯೊಂದು ದೂರದೂರ ಕನಸು ಕಾಣೊದಿಲ್ಲವೇ…
ಗುರಿಗೆ ಸೇರಿಸುತ್ತ ಪರರ ತಾನೆ ಸೆವೆಯಿತಲ್ಲವೇ…

ನಿಂತ ಬಂಗಿಗೆಂದೂ ಬಳಲಿ ಮೈಯ ಮುರಿಯೊದಿಲ್ಲವೇ..
ಅಂತೆಕಂತೆ ಕಥೆಗಳಲ್ಲಿ ಕಾಲಕಳೆವುದಿಲ್ಲವೇ…

ತಿರುಗಿ ಬರದ ದಾರಿಹೋಕರನ್ನು ನೆನೆಯುದಿಲ್ಲವೇ…
ಮರುಗುತವರ ಬವಣೆಗಳಿಗೆ ಸರಿದುನಿಲ್ಲಬಲ್ಲದೆ…

ತಂಗುವಂತ ತಾಣಗಳಲಿ ಜತೆಗೆ ಬಂದು ಉಳಿವುದೇ…
ಹಂಗು ತೊರೆದ ಶೃಂಗದಂತೆ ಬೆನ್ನು ತಿರುವಿ ನಿಲುವುದೇ…

ಕಟ್ಟುಪಾಡು, ಹೊಟ್ಟೆ ಹಾಡು ಎಲ್ಲಾ ಕಾಯುದಿಲ್ಲವೇ..
ಇಷ್ಟ ಇರುವ,ಇಲ್ಲದಿರುವ, ಎಲ್ಲ ಸಹಿಸೋದಿಲ್ಲವೇ…

ಗಮ್ಯಡೆದೆಯ ಪಯಣವನ್ನು ಅದಮ್ಯವಾಗಿಸೊಲ್ಲವೇ..
ನವ್ಯ ಕಾಲದಲ್ಲೂ ಅಪಸವ್ಯದ ಕರ್ಮ ತೇಯುತಿಲ್ಲವೇ..

ಹೊರಟು ನಿಂತ ಎಲ್ಲರದ್ದೂ ಹರಟೆ ಕೇಳೊದಿಲ್ಲವೇ…
ಒರಟು, ನುಣುಪು ಮೈಯ ಹೊತ್ತೂ ಧರ್ಮ ಮೆರೆಸೋದಿಲ್ಲವೇ..


One thought on “ವಿದ್ಯಾಶ್ರೀ ಅಡೂರ್ ಕವಿತೆ-ದಾರಿಯೊಂದರ ಧರ್ಮ.. ಕರ್ಮ

Leave a Reply

Back To Top