ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಒಲಿದ ಜೀವಗಳೆರಡು,ಹೊಸೆದ ಭಾವದಲಿ ಬೆಸೆದು ನಡೆಸಿಹವು ಆತ್ಮಸಂಧಾನ
ನಲಿದ ಮನಗಳಲುಂಟಾಗಿದೆ ನಿಷ್ಕಾಮ ಪ್ರೇಮದ ಸುಮಧುರ ಬಂಧನ..

ಸುಣ್ಣ ಕಾಣದೆ ಮಾಸಿದ ಗೋಡೆಗಳ‌ ನಡುವೆಯೂ ಅರಳಿಹುದು ಅನುರಾಗ
ಕಣ್ಣ ರೆಪ್ಪೆಗಳು ತುಸು ನಾಚಿ ನೆಲದೆಡೆ ನೋಡುತ ಹಾಡುತಿಹವು ಸಾನುರಾಗ..

ಸ್ನೇಹದೊಲುಮೆಯಲಿ ಮಿಂದ ಕರಗಳು ಪಾದಕೆ ಹಚ್ಚುತಿವೆ ಕೆಂಪು ಮದರಂಗಿ
ಮೋಹ ಮದಗಳನರಿಯದ ಗುಣವಂತ ಪತಿಯ ಪಡೆದ ಪುಣ್ಯವತಿ ಈ ಅರ್ಧಾಂಗಿ.‌.

ನಲ್ಲ ಬಿಡಿಸುತಿಹ ಚಿತ್ತಾರ ಹೆಚ್ಚಿಸಿದೆ ಶುಭ್ರ ಧವಳ ಪಾದಗಳ ಸೌಂದರ್ಯ
ಮೆಲ್ಲ ಮೆಲ್ಲನೆ ಇಬ್ಬರ ಹೃನ್ಮನಗಳನು ಆವರಿಸಿದೆ ಪ್ರೇಮಗಾನದ ಮಾಧುರ್ಯ.‌.

ಮೌನದರಮನೆಯ ಅರಸನ ಆಸ್ಥೆಯಿಂದ ಅವಳ
ಮನವಾಗಿದೆ ಮಂತ್ರಮುಗ್ಧ
ತನು ಮನಗಳಲಿ ಹರಿದಿಹ ಈ ಪ್ರೇಮಾನುಭೂತಿ ಅನುಪಮ,ಸರಳ ಸ್ನಿಗ್ಧ‌‌..


About The Author

Leave a Reply

You cannot copy content of this page

Scroll to Top