ಕಾವ್ಯ ಸಂಗಾತಿ
ನಾಗರಾಜ ಜಿ. ಎನ್. ಬಾಡ
ಹೆಜ್ಜೆ ಗುರುತು…
ಕಷ್ಟ ಕಾರ್ಪಣ್ಯದಲಿ
ಹೆಜ್ಜೆ ಮೂಡದ ಹಾದಿಯಲಿ
ಮುಂದೆ ಸಾಗಿರುವೆ
ಹಿಂತಿರುಗಿ ನೋಡಲು ಉಳಿದಿಲ್ಲ ಏನೂ
ಹೂವು ಅರಳಿ ಸೊಬಗ ತೋರಿ
ಖುಷಿಯ ಹರಡುವಂತೆ
ಬಿದ್ದ ಮೊದಲ ಮಳೆ ಹನಿಗೆ ಭೂಮಿಯ ಒಡಲಿಂದ ಹಸಿರು ಮೂಡುವಂತೆ..
ರೆಕ್ಕೆ ಬಲಿತ ಹಕ್ಕಿ ತನ್ನ ಬದುಕ ತಾನೇ ರೂಪಿಸಿಕೊಳ್ಳಲು ಗರಿ ಬಿಚ್ಚಿ ಹಾರುವಂತೆ..
ಇಷ್ಟ ಕಷ್ಟಗಳನ್ನು ಮರೆತು
ಮುಂದೆ ಹೆಜ್ಜೆ ಊರಬೇಕು
ಹೊಸ ದಾರಿಯ ಹುಡುಕ ಬೇಕು
ಹೊಸ ಗಾಳಿ ಬೀಸಿ ಬರಲು ನವಚೈತನ್ಯ ಮೂಡಿ ಬರಬೇಕು
ಮಳೆ ಗಾಳಿಗೆ ಅಂಜದೆ ಮುನ್ನುಗ್ಗುತ್ತಿರಬೇಕು
ಹೊಸ ಬೆಳಕ ಹುಡುಕ ಬೇಕು
ಹೆಜ್ಜೆ ಹೆಜ್ಜೆಗೂ ಹೊಸ ಗುರುತು
ಅಚ್ಚೊತ್ತ ಬೇಕು
ಹೊಸ ನಿಶಾನೆ ತೋರಬೇಕು
ಅಳಿಯದಂತೆ
ಹೆಸರು ಉಳಿಯಬೇಕು
ಗೆಲುವು ನಗೆಯ ಬೀರಬೇಕು
ನಾಗರಾಜ ಜಿ. ಎನ್. ಬಾಡ
ಹೆಜ್ಜೆ ಹೆಜ್ಜೆಗೂ ಒಂದು ಗುರುತು ಸಾಗುವಿಕೆಯಲ್ಲಿ. ಅಲ್ಲೊಂದು ಇಲ್ಲೊಂದು ಅದರ ಪ್ರತಿಬಿಂಬ. ಹೆಜ್ಜೆ ಗುರುತು ಒಂದು ಬದುಕಿನ ಖುಷಿ ಜೊತೆಗೆ ಹೊಸ ಸ್ಫೂರ್ತಿ. ಇಟ್ಟಲೆಲ್ಲಾ ಒಂದು ತಾಳ್ಮೆ, ಸಹನೆ, ಪ್ರಬುದ್ಧತೆ ಮೌಲ್ಯಗಳು ಎಲ್ಲವೂ ಒಂದು ಜೀವನದ ಪ್ರಸ್ತುತಿಗೆ ಬೇಕು ಎನಿಸುತ್ತದೆ. ಹೊಸದಾರಿ, ಹೊಸ ಹೆಜ್ಜೆ ಅಷ್ಟು ಸುಲಭ ಅಲ್ಲ. ಕಷ್ಟ ಖಂಡಿತಾ ಅಲ್ಲಾ. ಎಲ್ಲದರಲ್ಲೂ ಅಚ್ಚುಕಟ್ಟುತನ, ಸಮಯಪ್ರಜ್ಞೆ, ಕಾರ್ಯದಕ್ಷತೆ, ಪ್ರತಿಭೆ ಇದ್ದರೆ ಜೀವನ. ಕವನದ ಸಾಲುಗಳು ಚೆನ್ನಾಗಿದೆ.